ಕಲಸಿಂದ ಪಿಎಸಿಸಿಎಸ್‌ಗೆ ಬಿ.ಎನ್.ಸ್ವಾಮಿ ಅಧ್ಯಕ್ಷ

oplus_0
ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ.ಎನ್.ಸ್ವಾಮಿ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಜಯಲಕ್ಷ್ಮೀ, ಶಿವರಾಜ್, ಕೃಷ್ಣಮೂರ್ತಿ, ತಿಮ್ಮೇಗೌಡ ಇತರರು ಇದ್ದರು.
Published on

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕ ಬೆಲಸಿಂದ ಗ್ರಾಮದ ಬಿ.ಎನ್.ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡರು.

ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಗುಳಸಿಂದ ಗ್ರಾಮದ ಜಿ.ಆರ್.ಉಮೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬೆಲಸಿಂದ ಗ್ರಾಮದ ಬಿ.ಎನ್.ಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ವಿಜಯೇಂದ್ರ ಆವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿ ಮಾತನಾಡಿ, ಬಿ.ಎನ್.ಸ್ವಾಮಿ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಹೆಚ್ಚು ಲಾಭ ಗಳಿಸಲು ಶ್ರಮಿಸುವಂತೆ ಸಲಹೆ ನೀಡಿದರು.

ಬಿ.ಎನ್.ಸ್ವಾಮಿ ಮಾತನಾಡಿ, ಶಾಸಕರ ಸಹಕಾರದಿಂದ ಕೃಷಿ ಪತ್ತಿನ ಷೇರುದಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅವರ ಸಲಹೆ ಸಹಕಾರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರ ಒಮ್ಮತದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮೀ, ನಿರ್ದೇಶಕರಾದ ಶಿವರಾಜ್, ಕೃಷ್ಣಮೂರ್ತಿ, ತಿಮ್ಮೇಗೌಡ, ಜಿ.ಆರ್.ಉಮೇಶ್, ಮೋಹನ್‌ಕುಮಾರ್, ಜಿ.ಎಲ್.ನಾಗೇಶ್, ರತ್ನಾ, ಹರೀಶ್, ಮುನಿಸ್ವಾಮಿ, ನಾಗಯ್ಯ, ಮುಖಂಡರಾದ ದಿಂಡಗೂರು ಗೋವಿಂದರಾಜ್, ಅಣ್ಣೇಗೌಡರು, ಕೆರೆಚಿಕ್ಕೇನಹಳ್ಳಿ ಸ್ವಾಮಿ, ರಾಜು, ಸೇರಿ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಮಂಜೇಗೌಡ, ಗುಮಾಸ್ತ ರಂಗಸ್ವಾಮಿ, ಸಿಬ್ಬಂದಿ, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net