

ರಾಯಚೂರು ನಗರದ ನಿವಾಸಿಗಳು ತಮ್ಮ ಆಸ್ತಿಗಳಿಗೆ ಬಿ-ಖಾತಾ ನೀಡಲು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಹಿಂದಿನ ಸಾಕಷ್ಟು ಫೈಲ್‌ಗಳು ಮೂರು ನಾಲ್ಕು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ವಿಲೇವಾರಿ ಮಾಡುವ ಕೆಲಸವಾಗುತ್ತಿದೆಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ನಗರದ ವಾರ್ಡ್ 13ರ ವಿವಿಧ ಬಡಾವಣೆಯ ನಿವಾಸಿಗಳಿಗೆ ಮಹಾನಗರ ಪಾಲಿಕೆವತಿಯಿಂದ ಹಮ್ಮಿಕೊಂಡ ಬಿ-ಖಾತಾ ಅಭಿಯಾನ ಹಾಗೂ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದ ನಿವಾಸಿಗಳು ತಮ್ಮ ಆಸ್ತಿಗಳಿಗೆ ಬಿ-ಖಾತಾ ನೀಡಲು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಪಾಲಿಕೆಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಹಿಂದಿನ ಸಾಕಷ್ಟು ಫೈಲ್‌ಗಳು ಮೂರು ನಾಲ್ಕು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಕ್ಲಿಯರ್ ಮಾಡುವ ಕೆಲಸ ನಡೆಯುತ್ತಿದೆ ಕೆಲಸಗಳಿರುವುದರಿಂದ ಬಿಲ್ ಕಲೆಕ್ಟರ್ ನೇಮಕ್ಕೆ ಸೂಚಿಸಿದೆ ಎಂದರು.
ತೆರಿಗೆ ಪಾವತಿಗಾಗಿ 24 ಗಂಟೆಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಎರಡ್ಮೂರು ದಿನಗಳು ತೆಗೆದುಕೊಳ್ಳುತ್ತದೆ. ಸಾರ್ವಜನಿಕರಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ಹೆಲ್ಪ್‌ಲೈನ್ ಸೇವೆ ಇದ್ದು, ಯಾವುದೇ ಸಮಸ್ಯೆಗಳು ಮತ್ತು ದೂರುಗಳು ಇದ್ದಲ್ಲಿ ಸಲ್ಲಿಸಬಹುದು ಎಂದರು.
ನಗರದಲ್ಲಿ ಸ್ವಚ್ಚತಾ ಕಾರ್ಯಕ್ಕಾಗಿ ಯಂತ್ರಗಳ ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ ನಗರದಲ್ಲಿ ಸ್ವಚ್ಚತೆಗೆ ಹೊಂದಿಕೊಳ್ಳುವಂತಹ ಯಂತ್ರಗಳ ಖರೀದಿ ಹೆಚ್ಚು ಮಾಡಿ ಮುಂದಿನ 2 ವರ್ಷದೊಳಿಗೆ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿ ಮಹಾ ನಗರ ಪಾಲಿಕೆ ಮಾಡಲು ಶ್ರಮಿಸುವುದಗಿ ತಿಳಿಸಿದರು.
ಬಿಜೆಪಿ ಮುಖಂಡ ರವಿಂದ್ರ ಜಲ್ದಾರ್ ಮಾತನಾಡಿ, ನಗರದಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಮಾಡಲು ಮಹಾ ನಗರ ಪಾಲಿಕೆ ಆಯುಕ್ತರು ಹೆಚ್ಚು ಶ್ರಮಿಸುತ್ತಿದ್ದಾರೆ, ನಾವು ಸಹ ಸಹಕಾರ ನೀಡುತ್ತಿದ್ದೇವೆ. ನಗರದಲ್ಲಿ ಸಾಕಷ್ಟು ಬಡಾವಣೆಗಳಿಗೆ ಬಿ-ಖಾತಾಗಳಿಲ್ಲ, ಬಿ-ಖಾತಾ ಮಾಡಿಸಿಕೊಳ್ಳಲು ಅಭಿಯಾನ ನಡೆಸುತ್ತಿದ್ದು, ನಿವಾಸಿಗಳು ಇದರಿ ಸದುಪಯೋಗ ಪಡೆದುಕೊಳ್ಳಬೇಕಾಗಿದೆ, ಆಸ್ತಿಗಳ ದಾಖಲೆಗಳನ್ನು ಸಮರ್ಪಕವಾಗಿ ನೀಡಿದಲ್ಲಿ ತಮ್ಮ ಆಸ್ತಿ ಹೆಸರಿಗೆ ಮಾಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಕಾಲೋನಿಯ ಮುಖಂಡರಾದ ಬಸವರಾಜ, ಯಂಕಪ್ಪ, ನರಸಿಂಹಲು, ಸಲೀಂ, ಅಧಿಕಾರಿಗಳಾದ ಮಾರೆಪ್ಪ, ರಾಮು ನಾಯಕ, ಪವನ್, ಗೋವಿಂದ, ನಾರಾಯಣ, ಪೃಥ್ವಿರಾಜ ಸೇರಿ ಅನೇಕರು ಇದ್ದರು.