5ರಂದು ರಂಗ ಸಂಭ್ರಮದಲ್ಲಿ, ಬಿ.ಜಯಶ್ರೀ ಭಾಗಿ

IMG20250602211435.jpg
Published on

ಬೆಳಗಾವಿ: ನಾಡಿನ ಹೆಸರಾಂತ ರಂಗಗೀತೆಗಳ ಗಾಯಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಜಯಶ್ರೀ ಹಾಗೂ ಅವರ 12 ಕಲಾವಿದರ ತಂಡ ಜೂ.5ರಂದು ಮಧ್ಯಾಹ್ನ 3 ಗಂಟೆಗೆ ನೆಹರು ನಗರದ ಕನ್ನಡಭವನದಲ್ಲಿ ಆಯೋಜಿಸಲಾಗಿರುವ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾನು ನಮ್ಮವರೊಂದಿಗೆ ಫೌಂಡೇಶನ್ ಹಾಗೂ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ. ಗಾಯಕ ರಾಜಪ್ರಭು ಧೋತ್ರೆ ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅಧ್ಯಕ್ಷತೆ ವಹಿಸುವರು. ಪಾಲಿಕೆ ಆಯುಕ್ತೆ ಶುಭ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ ಹಾಗೂ ರಂಗ ಚಟುವಟಿಕೆಯ ಪೋಷಕ ರಮೇಶ ಜಂಗಲ್ ಆಗಮಿಸುವರು. ವಿಶೇಷ ಆಮಂತ್ರಿತರಾಗಿ ಜಯ ಭಾರತ ಫೌಂಡೇಶನ್ ಸಮೀರ ಕಣಬರಗಿ, ಭರತೇಶ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಜಿನಗೌಡ ಶಿಕ್ಷಣ ಸಮೂಹದ ಚೇರ್ಮನ್ ಗೋಪಾಲಗೌಡ ಜಿನಗೌಡ ಉಪಸ್ಥಿತರಿರುವರು. ಭಾರತಿ ಭಟ್, ಲಿಂಗರಾಜ ಶೆಟ್ಟೆನ್ನವರ, ಮಂಗಲಾ ಮಠದ, ಸೀಮಾ ಕುಲಕರ್ಣಿ, ಪ್ರತಿಭಾ ಕಳ್ಳಿಮಠ, ರೋಹಿಣಿ ಕರಜಗಿಮಠ, ಸುರೇಶ ಚಂದರಗಿ ಹಾಗೂ ಖುಷಿ ಢವಳಿ ತಂಡದವರಿಂದ ರಂಗಗೀತೆಗಳ ಹಾಡುಗಾರಿಕೆಯೂ ರಂಗ ಸಂಭ್ರಮದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net