ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಗೋಪಾಲಪುರದ ಬಿ.ಗುರುಸ್ವಾಮಿ ಪ್ರಬಲ ಆಕಾಂಕ್ಷಿ

ಗೋಪಾಲಪುರದ ಬಿ.ಗುರುಸ್ವಾಮಿ
ಗೋಪಾಲಪುರದ ಬಿ.ಗುರುಸ್ವಾಮಿ
Published on

ಮೈಸೂರು: ಮೈಮುಲ್ ಅಧ್ಯಕ್ಷ ಪ್ರಸನ್ನ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಆ.7ರಂದು ಚುನಾವಣೆ ನಡೆಯಲಿದ್ದು, ಮೈಮುಲ್ ನಾಮ ನಿರ್ದೇಶನ ಸದಸ್ಯ ಮೈಸೂರು ತಾಲೂಕಿನ ಗೋಪಾಲಪುರದ ಬಿ.ಗುರುಸ್ವಾಮಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬಿ.ಗುರುಸ್ವಾಮಿ ಅವರು ಗೋಪಾಲಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೆಲಸ ಮಾಡಿದ್ದು ಈಗ ಹಾಲಿ ಗ್ರಾ.ಪಂ. ಸದಸ್ಯ ಹಾಗೂ ಮೈಮುಲ್ ನಾಮ ನಿರ್ದೇಶನ ಸದಸ್ಯರಾಗಿದ್ದಾರೆ. ಜತಗೆ ಧನಗಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಇಲವಾಲ ಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಮುಲ್‌ನಲ್ಲಿ ಚುನಾಯಿತ ಸದಸ್ಯರು 15 ಜನರಿದ್ದು, ನಾಲ್ವರು ಸರ್ಕಾರಿ ನಾಮ ನಿರ್ದೇಶನ ಸದಸ್ಯರಿದ್ದಾರೆ. ಬಿ.ಗುರುಸ್ವಾಮಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿ ಮನವಿ ಮಾಡುವುದರ ಜತೆಗೆ ಮೈಮುಲ್‌ನ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net