ವಿಎಂಎಸ್‌ಆರ್ ಮಹಾವಿದ್ಯಾಲಯಕ್ಕೆ ಬಿ++ ಗ್ರೇಡ್

B++ Grade for VMSR Mahavidyalaya
ಹುನಗುಂದ ಪಟ್ಟಣದ ವಿ.ಎಂ.ಎಸ್.ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿದರು. ರವಿ ಹುಚನೂರ. ಎಂ.ಎಸ್. ಮಠ. ಇದ್ದರು.
Published on

ಹುನಗುಂದ: ಪಟ್ಟಣದ ವಿಎಂಎಸ್‌ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯಕ್ಕೆ ಈ ಬಾರಿ ಬಿ++ ಗ್ರೇಡ್ ಸಿಕ್ಕಿದೆ ಎಂದು ವಿ.ಮ. ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.

ಪಟ್ಟಣದ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜು. 25 ಮತ್ತು 26ರಂದು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಸಮಿತಿ(ನ್ಯಾಕ್) ಆಗಮಿಸಿ ಮಹಾವಿದ್ಯಾಲಯದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಾಗೂ ಮಹಾವಿದ್ಯಾಲಯದ ಕಟ್ಟಡ ಸೇರಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿ ಬಿ++ ಗ್ರೇಡ್ ನೀಡಿದ್ದು, ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರೇಣಿ ಸಿಗಲಿದೆ ಎಂದು ಭರವಸೆ ನೀಡಿದರು.

ಪ್ರಾಚಾರ್ಯೆ ಶಶಿಕಲಾ ಮಠ ಮಾತನಾಡಿ, ಮಹಾವಿದ್ಯಾಲಯಕ್ಕೆ ಈ ಶ್ರೇಣಿ ದೊರೆಯಲು ಗುರುಮಹಾಂತ ಶ್ರೀಗಳು, ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ನಿರ್ದೇಶಕರು, ಹಳೇಯ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶ್ರಮವೇ ಕಾರಣವಾಗಿದೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ರವಿ ಹುಚನೂರ, ಮಹಾಂತೇಶ ಕತ್ತಿ, ಬಿ.ಎಸ್. ಕೆಂದೂರ, ಎಂ.ಎಸ್. ಮಠ, ಸಂಗಣ್ಣ ಚಿನಿವಾಲರ, ರಾಚಪ್ಪ ಎಸ್. ರಾಜಮನಿ, ಡಾ. ಎಸ್.ಆರ್. ಗೋಲಗೊಂಡ, ಎಸ್.ಆರ್. ನಾಗಣ್ಣವರ, ಎಲ್.ಎನ್. ಕುಲಕರ್ಣಿ, ಡಾ. ಎಂ.ಬಿ. ಒಂಟಿ, ಡಾ. ಡಿ.ಎಸ್. ತಿಪ್ಪೇಸ್ವಾಮಿ, ನವೀನ ಪಾಟೀಲ, ಬಸವರಾಜ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net