ಶಾಸನದ ರಕ್ಷಣೆಗೆ ಕ್ರಮ ವಹಿಸಲಿ

16 Arakera Photo 01 (1)
Published on

ಅರಕೇರಾ: ಬಿ.ಗಣೇಕಲ್ ಗ್ರಾಮದ ಗುಡ್ಡದ ಉತ್ತರ ಭಾಗದಲ್ಲಿರುವ ಶಿಲಾ ಶಾಸನ ನಿರ್ಲಕ್ಷೃಕ್ಕೊಳಗಾಗಿದ್ದು, ಸಂಶೋಧನೆ ಮಾಡಿ ಜನರಿಗೆ ಇತಿಹಾಸದ ಮಾಹಿತಿ ನೀಡುವ ಕೆಲಸವಾಗಬೇಕಿದೆ ಜತೆಗೆ ಶಾಸನದ ರಕ್ಷಣೆಗೂ ಕ್ರಮ ವಹಿಸಬೇಕಿದೆ.

ಕುದುರೆ ಮೇಲೆ ಕುಳಿತಿರುವ ರಾಜ ಕೈಯಲ್ಲಿ ಖಡ್ಗವಿಡಿದು ಸೇವಕರ ಜತೆ ಸಂಚಾರ ಮಾಡುವಂತೆ ಕಾಣುವ ಚಿತ್ರವನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಮೂರ್ತಿ ಮುಂದೆ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಕೆತ್ತಲಾಗಿದೆ. ಅದರ ಬಳಿ ಚೌಕಾಕಾರದ ಚಿತ್ರವಿದೆ. ದೇವದುರ್ಗ, ಅರಕೇರಾ, ಗುರುಗುಂಟಾ ಸೇರಿ ಇತರ ಭಾಗದಲ್ಲಿ ಆಡಳಿತ ಮಾಡಿರುವ ಬಗ್ಗೆ ಶಾಸನ ಬಿಂಬಿಸುತ್ತದೆ. ಇತಿಹಾಸ ಪುರಾತತ್ವ ತಜ್ಞರು ಶಾಸನದ ಅಧ್ಯಯನ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net