ಬಿ.ಎಡ್. ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಸಂದರ್ಶನ ಕಾರ್ಯಕ್ರಮ

04GDG05
Published on

ಶಿಕ್ಷಕ ವೃತ್ತಿ ಪವಿತ್ರವಾದದ್ದು: ಮಂಗಲಾ

ಗದಗ : ಶಿಕ್ಷಕ ವೃತ್ತಿ ಪವಿತ್ರವಾದದ್ದು, ಮುಗ್ಧ ಮಕ್ಕಳ ಬದುಕಲ್ಲಿ ಶಿಕ್ಷಣದ ಬೆಳಕು ಬೀರಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಚೇತನವೇ ಶಿಕ್ಷಕರು ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಹೇಳಿದರು.
ಅವರು ಶುಕ್ರವಾರ ಗದುಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಗದಗ ಶಾಸ್ತಿçÃಜಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಸಂದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳು ತಮ್ಮ ತರಬೇತಿ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಸಂಪೂರ್ಣ ಪರಿಚಯ ತಿಳಿದುಕೊಳ್ಳಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ದಿಯೇ ನಮ್ಮ ಗುರಿಯಾಗಿರಲಿ. ಅಕ್ಷರದ ಬೀಜಗಳನ್ನು ಮಗುವಿನ ಮನದಲ್ಲಿ ಮೂಡಿಸಿ ಮುಖದಲ್ಲಿ ಮಂದಹಾಸ ತರುವ ಕೆಲಸ ಶಿಕ್ಷಕರದ್ದು ಎಂದರು.
ಸAಪನ್ಮೂಲ ವ್ಯಕ್ತಿ ಶ್ಯಾಮ ಲಾಂಡೆ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಕಾರ್ಯ ವೈಖರಿಗಳನ್ನು ವಿವರಿಸಿ ವೈಜ್ಞಾನಿಕ ಮನೋಭಾವನೆಯೊಂದಿಗೆ ನಾವು ಭೋಧನೆಯಲ್ಲಿ ತೊಡಗಿದಾಗ ಮಕ್ಕಳಲ್ಲಿ ಹೊಸ-ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗಿತ್ತದೆ ಎಂದರು.
ಬಿ.ಆರ್.ಪಿ ಎಂ.ಎಸ್.ಯರಗುಡಿ ಮಾತನಾಡಿ ಗದಗ ಶಹರ ಶಾಲೆಗಳು, ಕ್ಲಸ್ಟರ್ ವ್ಯಾಪ್ತಿ, ಸಂಪನ್ಮೂಲ ವ್ಯಕ್ತಿಗಳ ಕಾರ್ಯ ಚಟುವಟಿಕೆ ವಿವರಿಸಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ನಾವು ಮನುಜರು ಎಂಬುದನ್ನು ವಿದ್ಯಾರ್ಥಿಗಳಲ್ಲಿ ವಾಸ್ತವಿಕತೆಯೊಂದಗೆ ವಿವಿಧ ಸ್ಥರಗಳ ಪರಿಚಯವನ್ನು ಮಾಡಿಸಿ ಉತ್ತಮ ನಾಗರೀಕರರನ್ನಾಗಿ ಬೆಳೆಸಬೇಕೆಂದರು.
ಇನ್ನೋರ್ವ ಸಮಪನ್ಮೂಲ ವ್ಯಕ್ತಿ ಪಿ.ಡಿ ಮಂಗಳೂರ ಮಾತನಾಡಿ ತರಬೇತಿಗಳು ಶಿಕ್ಷಕ ವೃತ್ತಿಗೆ ಪೂರಕವಾಗುತ್ತವೆ. ಬೋಧನೆಯಲ್ಲಿ ಕ್ಲಿಷ್ಟಕರವಾದದ್ದನ್ನು ಶಿಕ್ಷಕರ ತರಭೇತಿಗಳು ಸರಳಗೊಳಿಸುತ್ತವೆ. ಪಡೆದ ತರಬೇತಿಗಳನ್ನು ಯಶಸ್ವಿ ಅನುಷ್ಠಾನಗೊಳಿಸುವುದು ಅವಶ್ಯ ಎಂದರು.
ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ ವಿಶೇಷ ಅಗತ್ಯತೆವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಾಗಿದೆ. ಎಲ್ಲರಂತೆ ಬಾಳಬಲ್ಲೇವು ಎಂಬ ದೃಢ ವಿಶ್ವಾಸವನ್ನು ವಿಶೇಷ ಮಕ್ಕಳಲ್ಲಿ ನಾವು ಮೂಡಿಸಬೇಕು. ಇಂತಹ ಮಕ್ಕಳ ತಂದೆ-ತಾಯಿಯAದಿರರಿಗೆ ಮನೋಸ್ಥೆöÊರ್ಯ ಹೆಚ್ಚಿಸುವ ಕೆಲಸ ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಸಿ.ಪ್ರಭಯ್ಯನಮಠ ಮಾತನಾಡಿ ಕಲಿಕೆಯು ಯಾವಾಗಲೂ ನಿರಂತರವಾಗಿರಬೇಕು. ಓದುವ ಹವ್ಯಾಸ-ಜ್ಞಾನದ ವಿಕಾಸ. ಹೆಚ್ಚು ಓದುವುದರಿಂದ ನಮ್ಮಲ್ಲಿ ತಿಳುವಳಿಕೆಯು ಮೂಡಿಬರುತ್ತದೆ. ಭೋದನಾ ಪ್ರಕ್ರಿಯೆಯಲ್ಲಿ ಇದು ಹೆಚ್ಚು ಪರಿಣಾಮಕಾರಿ ಆಗುವದು ಎಂದರು.
ಪೂಜಾ ಅಂಬಲಿಯವರ ಪ್ರಾರ್ಥಿಸಿದರು. ಪ್ರೊ.ನಿರ್ಮಿತಾ ಮಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೇತ್ರಾವತಿ ಹಿರೇಕುಂಬಾರ ನಿರೂಪಿಸಿದರು. ಕೊನೆಯಲ್ಲಿ ಪ್ರೊ.ಹೆಚ್ ಗಂಗಾಧರ ವಂದಿಸಿದರು.
ಕಾರ್ಯಕ್ರಮದಲ್ಲಿ ಐಶ್ವರ್ಯ ಕಾಮಧೇನು, ಲಲಿತಾ ಲಮಾಣಿ, ಸುಧಾ ಜುಲ್ಪಿ, ಅಂಬಿಕಾ ಲಮಾಣಿ, ಹೆಚ್.ದೀಪಾ, ಅಶ್ವಿನಿ ಕುಲಕೇನವರ, ಸುಧಾ ಪಾಟೀಲ, ಚೈತ್ರಾ ಕುರಹಟ್ಟಿ, ಎಂ.ಎನ್.ಸುಷ್ಮಾ, ಆಫ್ರೀನ್‌ಭಾನು ಸಂದಿಮನಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
= = =
ಫೋಟೋ ಇದೆ : ಬಿ.ಎಡ್ ಸ್ಟುಡೆಂಟ್ಸ್
= = =
ಸುದ್ದಿ ಪ್ರಕಟಣೆ ಕೃಪೆಗೆ/ ಪಿ.ಡಿ.ಮಂಗಳೂರ, ಗದಗ.
= = =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net