ಬಿ.ಇಡಿ ಕಾಲೇಜು ಅಕ್ರಮಕ್ಕೆ ಕಡಿವಾಣ!

02
Published on

ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್​ ಸಭೆಯಲ್ಲಿ ತೀರ್ಮಾನ

ವಿಜಯವಾಣಿ ಸುದ್ದಿಜಾಲ ತುಮಕೂರು
ತುಮಕೂರು ವಿವಿ ಹಂಗಾಮಿ ಸಂಚಿತ ವೇತನ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ದ್ವೀತಿಯ ದರ್ಜೆ ಸಹಾಯಕರನ್ನು ದುರ್ನಡತೆ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಸಿಂಡಿಕೇಟ್​ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇತ್ತೀಚೆಗೆ ನಡೆದ ವಿವಿ ಸಿಂಡಿಕೇಟ್​ ಸಭೆಯಲ್ಲಿ ಮಹತ್ವದ ರ್ನಿಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಹಂಗಾಮಿ ಸಂಚಿತ ವೇತನ ನೌಕರರಾದ ಆರ್​.ಗಣೇಶ್​, ಎಚ್​.ಎಸ್​.ವೇಣುಗೋಪಾಲ ಹಾಗೂ ಉಮಾಶಂಕರ್​ ದೀತ್​ ಅಮಾನತಾದವರು. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಹಿನ್ನೆಲೆಯಲ್ಲಿ ವಿವಿ ನೀಡಿದ್ದ ನೋಟಿಸ್​ಗೆ ಸಿಬ್ಬಂದಿ ಉದ್ಧಟತನದ ಉತ್ತರ ನೀಡಿರುವುದು ಆಶ್ಚರ್ಯ ಮೂಡಿಸಿದೆ.


ಸಭೆಯ ಮುಂದೆ ಹಾಜರಾದ ವೇಣುಗೋಪಾಲ್​ ಎಂಬುವವರು ಅರಸೀಕೆರೆಯಿಂದ ರೈಲಿನಲ್ಲಿ ಬರುವುದರಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಲು ಕಷ್ಟ ಎಂದು ಉತ್ತರಿಸಿದ್ದಾರೆ, ಆರ್​.ಗಣೇಶ್​ ಸರಿಯಾದ ಸಮಯಕ್ಕೆ ಹಾಜರಾಗಲು ಪ್ರಯತ್ನಿಸುತ್ತೇನೆ ಎಂದು ಉತ್ತರಿಸಿದ್ದಾರೆ. ಉಮಾಶಂಕರ್​ ದೀತ್​ ಸಭೆಗೆ ಗೈರಾಗಿದ್ದಾರೆ. ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡು ವಿವಿ ಕಠಿಣ ಕ್ರಮಕೈಗೊಂಡಿದೆ. ಪ್ರೊ.ಕೆ.ನರಹರಿ ಅವರು ವಿದ್ಯಾವಿಷಯಕ ಪರಿಷತ್​ಗೆ ಸತತವಾಗಿ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು "ವಿಶೇಷ ಆಹ್ವಾನಿತ' ಸದಸ್ಯತ್ವದಿಂದ ಬಿಡುಗಡೆಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಇದಕ್ಕೂ ಪೂರ್ವದಲ್ಲಿ ನರಹರಿ ಅವರೊಂದಿಗೆ ಪತ್ರವ್ಯವಹಾರ ನಡೆಸಿ ಅವರ ಅಭಿಪ್ರಾಯ ಪಡೆಯಲು ಸೂಚಿಸಲಾಗಿದೆ. ದುಬಾರಿ ವೆಚ್ಚದ ಕಾರ್ಯಕ್ರಮ ಎಂದು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವಿವಿ 17ನೇ ಟಿಕೋತ್ಸವದ ಖರ್ಚು, ವೆಚ್ಚದ ಎಲ್ಲ ಬಿಲ್ಲುಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲು ಅನುಮತಿ ನೀಡಲಾಗಿದೆ.

2.5 ಲಕ್ಷ ರೂ. ದಂಡ: ಶೈಕ್ಷಣಿಕ ವ್ಯಸಸ್ಥೆಯಲ್ಲಿ ಅಕ್ರಮ ಹೊಂದಾಣಿಕೆ ಕಾರಣಕ್ಕೆ ಸಾರ್ವಜನಿಕ ಟೀಕೆಗೆ ಗುರಿಯಾಗಿರುವ ಕೆಲವು ಬಿ.ಇಡಿ ಕಾಲೇಜುಗಳ ಕಾರ್ಯವೈಖರಿಗಳನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ವಿವಿ, ಕಾಲೇಜುಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಬಗ್ಗೆ ಸಿಂಡಿಕೇಟ್​ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿದ್ದು, ಅಕಾಡಮಿಕ್​ ಕೌನ್ಸಿಲ್​ ಶಿಫಾರಸು ಆಧರಿಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಮಕೂರು ವಿವಿ ವ್ಯಾಪ್ತಿಯಲ್ಲಿ 16 ಬಿ.ಇಡಿ ಕಾಲೇಜುಗಳಿಂದ ಈ ಪೈಕಿ 5 ಕಾಲೇಜು ಮಾತ್ರ ಎನ್​ಸಿಟಿಇ ನಿಯಮಾವಳಿ ಪಾಲಿಸುತ್ತಿವೆ ಎಂದು ಸಿಂಡಿಕೇಟ್​ ಸದಸ್ಯರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ವರದಿ ನೀಡಿದೆ. ಈ ಎಲ್ಲ ಕಾಲೇಜುಗಳಿಗೆ ಮುಂದಿನ ನಾಲ್ಕು ತಿಂಗಳಲ್ಲಿ ವಿಧಿಸಿರುವ ಷರತ್ತು ಪಾಲಿಸಲು ಗಡುವು ನೀಡಲಾಗಿದೆ. ಜತೆಗೆ ಮುಂಬರುವ ಬಿ.ಇಡಿ ಪರೀೆಗಳು ವಿವಿಯಲ್ಲಿಯೇ ನಡೆಯಲಿವೆ, ಮೌಲ್ಯಮಾಪನ ಕೂಡ ಡಬಲ್​ ವ್ಯಾಲ್ಯೂವೇಷನ್​ ಮಾಡಲು ತೀರ್ಮಾನಿಸಲಾಗಿದೆ. ಪರೀೆಗೆ ಸಂಬಂಧಿಸಿದಂತೆ ಕ್ವೆಷನ್​ ಬ್ಯಾಂಕ್​ ತಯಾರಿಸಲು ತಿಳಿಸಲಾಗಿದೆ. ಎನ್​ಸಿಟಿಇ ನಿಯಮಾವಳಿ ಪಾಲಿಸದ ಕಾಲೇಜುಗಳಿಗೆ ತಲಾ 2.5 ಲಕ್ಷ ರೂ. ದಂಡ ವಿಧಿಸುವುದು ಹಾಗೂ ನೋಟಿಸ್​ ನೀಡಿ ಉತ್ತರ ಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸ್ನಾತಕೋತ್ತರ ಮಟ್ಟದಲ್ಲಿ ಸ್ಕೂಲ್​ ಪರಿಕಲ್ಪನೆ: ತುಮಕೂರು ವಿವಿ ಸ್ನಾತಕೋತ್ತರ ಮಟ್ಟದಲ್ಲಿ ಸ್ಕೂಲ್​ ಪರಿಕಲ್ಪನೆ ಅನುಷ್ಠಾನಗೊಳಿಸಲು ವಿವಿ ಸಿಂಡಿಕೇಟ್​ ಗಂಭೀರ ಚಿಂತನೆ ನಡೆಸಿದ್ದು, ಸ್ಕೂಲ್​ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. ಸ್ಕೂಲ್​ ಆ್​ ನ್ಯಾಚುರಲ್​ ಸೈನ್ಸ್​, ಸ್ಕೂಲ್​ ಆ್​ ಫಿಜಿಕಲ್​ ಸೈನ್ಸ್​, ಸ್ಕೂಲ್​ ಆ್​ ಕ್ರಿಮಿನಲ್​ ಸೈನ್ಸ್​, ಸ್ಕೂಲ್​ ಆ್​ ಈರ್ತ್​ ಅಂಡ್​ ಎನ್ವಿರಾನ್​ಮೆಂಟಲ್​ ಸೈನ್ಸ್​, ಸ್ಕೂಲ್​ ಆ್​ ಕಾಮರ್ಸ್​ ಆ್ಯಂಡ್​ ಮ್ಯಾನೇಜ್​ನ್ಮೆಂಟ್​, ಸ್ಕೂಲ್​ ಆ್​ ಹುಮಾನಿಟಿಸ್​/ಸೋಶಿಯಲ್​ ಸೈನ್ಸಸ್​, ಸ್ಕೂಲ್​ ಆ್​ ಇನ್​ಾರ್​ಮೇಷನ್​ ಟೆಕ್ನಾಲಜಿ, ಸ್ಕೂಲ್​ ಆ್​ ಎಜುಕೇಷನ್​ ಮತ್ತು ಸ್ಕೂಲ್​ ಆ್​ ಲಾ ವಿಶ್ವಿವಿದ್ಯಾಲಯದಲ್ಲಿ ಪ್ರಾರಂಭಿಸಲಾಗುತ್ತಿದೆ. ಪ್ರತಿ ಸ್ಕೂಲಿಗೂ ಒಬ್ಬರು ನಿರ್ದೇಶಕರನ್ನು ಜೇಷ್ಠತೆಗೆ ಅನುಗುಣವಾಗಿ ಎರಡು ವರ್ಷಗಳ ಅವಧಿಗೆ ನೇಮಿಸಲು ವಿದ್ಯಾವಿಷಯಕ ಪರಿಷತ್​ ಸಭೆಯ ಶಿಾರಸುಗಳನ್ನು ಸಿಂಡಿಕೇಟ್​ ಸಭೆಯಲ್ಲಿ ಅನುಮೋದಿಸಲಾಗಿದೆ.

ಮಹಿಳಾ ವಿದ್ಯಾರ್ಥಿಗಳಿಗೆ ಮಾತೃತ್ವ ರಜೆ
ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮಾತೃತ್ವ/ಶಿಶುಪಾಲನಾ ರಜೆ ಮಂಜೂರು ಮಾಡಲು ಮಾರ್ಗಸೂಚಿ ಅನುಷ್ಠಾನಗೊಳಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಯುಜಿಸಿ ನಿಯಮಾವಳಿ ಅನುಸಾರ ಕ್ರಮಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net