ಶಾಂತಳ್ಳಿ ಪತ್ತಿನ ಸಂಘಕ್ಕೆ ಬಿ.ಈ.ಜಯೇಂದ್ರ ಅಧ್ಯಕ್ಷ

5ss1jaganpal maatu
ಸೋಮವಾರಪೇಟೆ ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿ.ಈ.ಜಯೇಂದ್ರ ಅವಿರೋಧವಾಗಿ ಆಯ್ಕೆಯಾದರು.
Published on

ಸೋಮವಾರಪೇಟೆ: ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಈ.ಜಯೇಂದ್ರ, ಉಪಾಧ್ಯಕ್ಷರಾಗಿ ಕೆ.ಪಿ.ಕುಮಾರ್ ಆಯ್ಕೆಗೊಂಡಿದ್ದಾರೆ. ಸಂಘದ ಸಭಾಂಗಣಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.

13 ನಿರ್ದೇಶಕ ಸ್ಥಾನವನ್ನು ಹೊಂದಿರುವ ಶಾಂತಳ್ಳಿ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತರು 7 ಮಂದಿ ಆಯ್ಕೆಯಾಗಿದ್ದರೆ, ಬಿಜೆಪಿಯಿಂದ 5 ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಒಬ್ಬರು ಆಯ್ಕೆಯಾಗಿದ್ದರು.

ಬಿ.ಎ.ಧರ್ಮಪ್ಪ, ಬಿ.ಎಸ್.ಲಿಂಗರಾಜು, ಹರಗ ತ್ರಿಶೂಲ್, ಸುಖಾಂತ್ ಬಸವರಾಜು, ಶಿವಕುಮಾರ್, ನಿಶಾಂತ್, ಪರಮೇಶ, ಚಂದ್ರಾವತಿ ಉದಯ್, ಅನಿತಾ, ಪಿ.ಎಸ್.ಅರುಣ್, ಎಚ್.ರಾಜೇಶ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಸತತ ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಿನ್ನೆಲೆ ಬಿ.ಈ. ಜಯೇಂದ್ರ ಅಧ್ಯಕ್ಷಗಾದಿ ಒಲಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net