ಬಿ.ಡಿ.ಮಂಜುನಾಥ್ ಶ್ರೀರಾಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

Oplus_131072
ಸೋಮವಾರಪೇಟೆ ಶ್ರೀರಾಮ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರನ್ನು ಅಭಿನಂದಿಸಲಾಯಿತು.
Published on

ಸೋಮವಾರಪೇಟೆ: ಶ್ರೀರಾಮ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ.ಡಿ.ಮಂಜುನಾಥ್, ಉಪಾಧ್ಯಕ್ಷರಾಗಿ ಎನ್.ಎನ್.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾದರು. ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಉಳಿದಂತೆ ನಿರ್ದೇಶಕರಾಗಿ ಬಿ.ಎಸ್.ಅನಂತರಾಮ್, ಬಿ.ಎಂ.ಸುರೇಶ್, ಬಿ.ಸಿ.ರೇವಣ್ಣ, ಬಿ.ಕೆ.ಉದಯಕುಮಾರ್, ಬಿ.ಎಸ್. ರಾಮಶೆಟ್ಟಿ, ಬಿ.ಎಂ.ಶ್ರೀಧರ್, ಬಿ.ಎಸ್.ಸತೀನ್ ಸಿದ್ದಪ್ಪ, ಬಿ.ಸಿ.ವೆಂಕಟೇಶ್, ಜ್ಯೋತಿ ಶುಭಕರ್, ಹೇಮಲತಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ಮೋಹನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net