ರಾಹುಲ್ ಅವರಂತೆ ಬಿಜೆಪಿ ಚಿಲ್ರೆ ಕೆಲಸ ಮಾಡಲ್ಲ

IMG-20220916-WA001222
Published on

ಚಿತ್ರದುರ್ಗ:ಈ ನೆಲ ವಿಷದಿಂದ ಕೂಡಿದೆ,ಭಾರತ ವಾಸಕ್ಕೆ ಯೋಗವಲ್ಲ ಎಂದಿದ್ದ ಕೇರಳದ ಪಾದ್ರಿಯೊಬ್ಬರ ಮನೆಗೆ ಭೇಟಿ ನೀಡಿರುವ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಟುವಾಗಿ ವಿರೋಧಿಸಿದ್ದಾರೆ.

ದೇಶದ ಬಗ್ಗೆ ಹಗುರುವಾಗಿ ಮಾತನಾಡಿರುವ ಪಾದ್ರಿ ಮನೆಗೆ ಹೋಗಿ ಅವರಿಗೆ ಕಾಲಿಗೆ ಬೀಳುತ್ತಾರೆ ಎಂದರೆ ರಾಹುಲ್ ಅವರಿಗೆ ದೇಶ ದ ಮೇಲೆ ಇನ್ನೆಂಥ ಭಕ್ತಿ,ಪ್ರೀತಿ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿ ಈ ರೀತಿಯ ಯಾವುದೇ ಚಿಲ್ಲರೆ ಕೆಲಸಗಳನ್ನು ಮಾಡು ವುದಿಲ್ಲ. ರಾಹುಲ್ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರಿಯಾಗಿದೆ.

ಪಂಚಮಸಾಲಿ ಸಮುದಾಯದ 2ಎ ಮೀಸಲು ಬೇಡಿಕೆ ವಿಷಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸುತ್ತಾರೆ. ವೀರಶೈವ ಲಿಂಗಾಯತ ಸಮುದಾಯದವರು ಎಲ್ಲರೂ ಒಗ್ಗಟ್ಟಿನಿಂದ ಕೇಂದ್ರದ ಓಬಿಸಿಗೆ ಪಟ್ಟಿಗೆ ಸೇರಿಸಲು ಹೋರಾಟ ಮಾಡಬೇಕಾಗಿದೆ. ದೇಶದ ಜ ನಸಂಖ್ಯೆಗೆ ಹೋಲಿಸಿದರೆ ವೀರಶೈವ ಲಿಂಗಾಯತರು ಅಲ್ಪಸಂಖ್ಯಾತರಿದ್ದಾರೆ. ಈ ಕುರಿತಂತೆ ಕೇಂದ್ರದ ಓಬಿಸಿ ಪಟ್ಟಿಗೆ ವೀರಶೈವ ಲಿಂಗಾಯ ತರನ್ನು ಸೇರಿಸುವಂತೆ ಸಿಎಂಗೂ ಮನವಿ ಮಾಡುವುದಾಗಿ ತಿಳಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net