

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿಯ ಡಿಸಿಸಿ ಬ್ಯಾಂಕ್ ಶಾಖೆಯ ಸಭಾಭವನದಲ್ಲಿ ಬುಧವಾರ ಗ್ರಾಹಕರ ಸಭೆ ನಡೆಯಿತು.
ಉದ್ಘಾಟನೆ ನೆರವೇರಿಸಿದ ಸಹಕಾರ ಸಂಘಗಳ ವಿಶ್ರಾಂತ ಅಪರ ನಿಬಂಧಕರು ಮತ್ತು ಬ್ಯಾಂಕ್‌ನ ಅಭಿವೃದ್ಧಿ ಅಧಿಕಾರಿ ಎಂ.ಜಿ. ಪಾಟೀಲ ಮಾತನಾಡಿ, ಡಿಸಿಸಿ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿದೆ. ಅಂತೆಯೇ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಏಳ್ಗೆ ಸಾಧಿಸಲಿದೆ ಎಂದರು.
ಬಳಿಕ ಗ್ರಾಹಕರೊಂದಿಗೆ ಸಮಾಲೋಚಿಸಿದರು. ಗ್ರಾಹಕರು ತಮ್ಮ ತಮ್ಮ ಕುಂದು-ಕೊರತೆಗಳನ್ನು, ಸೌಲಭ್ಯಗಳ ಕುರಿತು ಚರ್ಚಿಸಿದರು.
ಮುಖಂಡರಾದ ಸಂಗನಗೌಡ ಬಿ.ಚಿಕ್ಕೊಂಡ, ಬಸವರಾಜ ದೇಸಾಯಿ, ಅನೀಲ ಅಗರವಾಲ, ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಪಿ.ವೈ. ಡೆಂಗಿ ಹಾಗೂ ಬ್ಯಾಂಕ್‌ನ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಹಕರು ಪಾಲ್ಗೊಂಡಿದ್ದರು.