ಹಿರೇಮುರಾಳ ಸಂಗಮೇಶ್ವರ ವಿವಿಧೋದ್ದೇಶ ಪಿಕೆಪಿಎಸ್ ವಾರ್ಷಿಕ ಮಹಾಸಭೆ

B.B. Bhovi, Awarded to meritorious students, Hiremurala Sangameshwara Multipurpose PKPS,
ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದ ಶಂಕರ ನೇಕಾರ ಸಹಕಾರಿ ಸೌಲಭ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿ.ಬಿ.ಭೋವಿ, ಎ.ಬಿ.ಬಾಗೇವಾಡಿ ಇತರರಿದ್ದರು.
Published on

ಮುದ್ದೇಬಿಹಾಳ: ಮುಂಬರುವ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಪೂರೈಸುವ ಮಳಿಗೆಗಳನ್ನು ತೆರೆಯುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವಂಥ ಯೋಜನೆಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದ್ದೇವೆ ಎಂದು ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ.ಭೋವಿ ಹೇಳಿದರು.

ತಾಲೂಕಿನ ಹಿರೇಮುರಾಳದ ಶಂಕರ ನೇಕಾರ ಸಹಕಾರಿ ಸೌಲಭ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸಗೊಬ್ಬರ ತರಲು ರೈತರು ಪಟ್ಟಣಗಳಿಗೆ ಅಲೆದಾಡಬೇಕಿದೆ. ಸರ್ಕಾರದಿಂದ ಗೊಬ್ಬರ ಪೂರೈಕೆಯಾದರೆ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಗೊಬ್ಬರ ಮಾರಾಟ ಮಾಡಲಾಗುವುದು. ಈ ಬಗ್ಗೆ ಮುಂಬರುವ ದಿನಗಳಲ್ಲಿ ಸಹಕಾರಿ ರಂಗದ ತಜ್ಞರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ಸಹಕಾರಿ ಧುರೀಣ ಎಂ.ಎಸ್.ಪಾಟೀಲ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಲುವಾಗಿ ಯಾವುದೇ ಯೋಜನೆಯನ್ನು ಘೋಷಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದೆ. ರೈತರ ಏಳಿಗೆಗೆ ಮತ್ತೆ ಆಧಾರವಾಗುವುದು ಸಹಕಾರ ಸಂಘಗಳೇ ಎಂದು ಹೇಳಿದರು.

ಶಿಕ್ಷಕ ಜಹಾಂಗೀರ ಮುಲ್ಲಾ, ಎಂ.ಎಸ್.ಗುಡಗುಂಟಿ ಮಾತನಾಡಿದರು. ವೇ.ಪಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಪ್ರಸನ್ನಕುಮಾರ ಜಹಾಗೀರದಾರ, ನಿವೃತ್ತ ಇಂಜಿನಿಯರ್ ಬಿ.ಬಿ.ಪಾಟೀಲ, ಮುಖಂಡ ರಾಜು ದಡ್ಡಿ, ಸಂಘದ ನಿರ್ದೇಶಕರಾದ ಅಡಿವೆಪ್ಪ ನಾಡಗೌಡರ, ಬಸಯ್ಯ ಮಠ, ಬಸವರಾಜ ಜೈನಾಪುರ, ಗೌಡಪ್ಪ ಯಾಳವಾರ, ಬಸವರಾಜ ಸರೂರ, ಭೂಮಣ್ಣ ತೊಗರಿ, ರಮೇಶ ಇಂಗಳೇಶ್ವರ, ಶೇಖಪ್ಪ ನಾರಾಯಣಪುರ, ರೇಣುಕಾ ನಾಗರಬೆಟ್ಟ, ಚಂದ್ರಶೇಖರ ರಾಮೋಡಗಿ, ಈರಮ್ಮ ಛಟ್ಟಿ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಐ.ಕೆ.ಮಣೂರ ಇತರರಿದ್ದರು.

ಹಿರೇಮುರಾಳ ಶಾಖೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಬಿ.ಬಾಗೇವಾಡಿ ವರದಿ ವಾಚಿಸಿದರು. ನಾಗರಬೆಟ್ಟ ಶಾಖೆ ವ್ಯವಸ್ಥಾಪಕ ರುದ್ರು ರಾಮೋಡಗಿ ನಿರೂಪಿಸಿದರು. ಸಿಬ್ಬಂದಿ ಆರ್.ಎಸ್.ಬಿರಾದಾರ, ಸಿ.ಆರ್.ಕಮ್ಮಾರ, ಜೆ.ಐ.ಬಾಗೇವಾಡಿ, ಎಲ್.ಬಿ.ಭೋವಿ, ಜಿ.ಜಿ.ರಕ್ಕಸಗಿ, ಎಂ.ಕೆ.ನಾಗರಬೆಟ್ಟ ಮೊದಲಾದವರು ಇದ್ದರು. ಸಭೆಯ ಆರಂಭದಲ್ಲಿ ಈಚೇಗೆ ರಸ್ತೆ ಅಪಘಾತದಲ್ಲಿ ನಿಧನರಾದ ಸಂಘದ ಉಪಾಧ್ಯಕ್ಷ ನಿಂಗಣ್ಣ ರಾಮೋಡಗಿ ಅವರಿಗೆ ಒಂದು ನಿಮಿಷ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net