ಬಿ.ಎ.ಅಂಕಿತ್ ಕರಾಟೆ ಪರೀಕ್ಷೆಯಲ್ಲಿ ಬ್ಲಾೃಕ್ ಬೆಲ್ಟ್

8.npk-01
ಕರಾಟೆ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿ ಉತ್ತಿರ್ಣರಾದ. ವಿದ್ಯಾರ್ಥಿಗಳು.
Published on

ನಾಪೋಕ್ಲು: ಚೇರಂಬಾಣೆಯ ಕೊಟ್ಟೂರು ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಶಾಲಿನ್ ಕುಂಪು ವತಿಯಿಂದ ಏರ್ಪಡಿಸಲಾಗಿದ್ದ ಕರಾಟೆ ಪರೀಕ್ಷೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಬಿ.ಎ. ಅಂಕಿತ್ ಉತ್ತಿರ್ಣನಾಗಿ ಬ್ಲಾೃಕ್ ಬೆಲ್ಟ್ ಪಡೆದರು. ಈ ಕರಾಟೆ ಪರೀಕ್ಷಾ ಶಿಬಿರದಲ್ಲಿ ಒಟ್ಟು 36 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಿರ್ಣರಾದರು.

ಪರೀಕ್ಷಾ ಪರಿವೀಕ್ಷಕರಾಗಿ ಭಾರತ ಮುಖ್ಯ ತರಬೇತುದಾರರಾದ ಇಂದ್ರಜಿತ್, ಭಾರತ ತರಬೇತುದಾರರಾದ ದೇವರಾಜ, ಶಾಲಾ ತರಬೇತುದಾರರಾದ ನಾಟೋಳಂಡ ನಂಜುಂಡ ಕರ್ತವ್ಯ ನಿರ್ವಹಿಸಿದರು. ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕ ಕುದುಪಜೆ ಕವನ್‌ಕುಮಾರ್, ಶಾಲಾ ವ್ಯವಸ್ಥಾಪಕರಾದ ನಾಟೋಳಂಡ ಸರೋಜಿನಿ ಬಹುಮಾನ ವಿತರಿಸಿದರು. ಅಂಕಿತ್ ಅವರು ಚೆಟ್ಟಿಮಾನಿಯ ಅಶೋಕ್ ಮತ್ತು ರೇಖಾ ದಂಪತಿಯ ದ್ವಿತೀಯ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net