ಶ್ರೀ ರಾಮನನ್ನು ಸಂಭ್ರಮದಿಂದ ಸ್ವಾಗತಿಸೋಣ

1501Aland3
ಆಳಂದನ ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೧೭ನೇ ಪುಣ್ಯಾರಾಧನೆ ಹಾಗೂ ಪಟ್ಟಾಭಿಷೇಕ ಸಮಾರಂಭದಲ್ಲಿ ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿದರು. ಶ್ರೀ ಚನ್ನಬಸವ ಪಟ್ಟದ್ದೇವರು, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಪೂರ್ಣಾನಂದ ಸ್ವಾಮೀಜಿ ಇತರರಿದ್ದರು.
Published on

ಆಳಂದ: ಅಯೋಧ್ಯೆಯಲ್ಲಿ ಜ.೨೨ರಂದು ಭವ್ಯ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಸಮಸ್ತ ಹಿಂದುಗಳ ಕನಸೊಂದು ನನಸಾಗುತ್ತಿದೆ ಎಂದು ಜಿಡಗಾ- ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಶ್ರೀ ತೀರ್ಥಲಿಂಗ ಪಟ್ಟದ್ದೇವರ ೧೭ನೇ ಪುಣ್ಯಾರಾಧನೆ ಹಾಗೂ ಶ್ರೀ ಚನ್ನಬಸಪ್ಪ ಪಟ್ಟದ್ದೇವರ ಪಟ್ಟಾಭಿಷೇಕ ಸಮಾರೋಪ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಮಾತನಾಡಿ, ಸುಮಾರು ೫೦೦ ವರ್ಷಗಳಿಂದಲೂ ರಾಮ ಮಂದಿರ ನಿರ್ಮಾಣ ಭಾರತೀಯರ ಕನಸಾಗಿತ್ತು. ಈಗ ಲೋಕಾರ್ಪಣೆಗೊಳ್ಳುತ್ತಿರುವುದು ಎಲ್ಲರ ಮನದಲ್ಲಿ ಸಂತಸ ಮೂಡಿದೆ. ಆ ದಿನದಂದು ಪ್ರತಿಯೊಬ್ಬರೂ ದೀಪಗಳನ್ನು ಬೆಳಗಿ, ಸಂಭ್ರಮಿಸೋಣ ಎಂದು ಕರೆ ನೀಡಿದರು.

ಪೀಠಾಧಿಪತಿ ಶ್ರೀ ಚನ್ನಬಸಪ್ಪ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಚಾಳಕಾಪುರದ ಶ್ರೀ ಶಂಕರಾನAದ ಸ್ವಾಮೀಜಿ, ಯಳವಂತಗಿಯ ಶ್ರೀ ಪೂರ್ಣಾನಂದ ಸ್ವಾಮೀಜಿ, ಜಿಲ್ಲಾ ಗೋರಕ್ಷಕ ಶೇಷಾದ್ರಿ ಕುಲಕರ್ಣಿ, ಗುಳ್ಳೆದಗುಡ್ಡ ಶ್ರೀಗಳು ಇತರರಿದ್ದರು. ಹಟಗಾರ ಸಮಾಜದ ತಾಲೂಕು ಅಧ್ಯಕ್ಷ ಸೂರ್ಯಕಾಂತ ತಟ್ಟಿ ಸ್ವಾಗತ ಕೋರಿ, ಪ್ರಾಸ್ತಾವಿಕ ಮಾತನಾಡಿದರು.

ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಪಾಲ್ಗೊಂಡ ಅಪಾರ ಭಕ್ತರಿಗೆ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ ವಿತರಿಸಲಾಯಿತು. ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಶಾಸ್ತಿç ಪ್ರವಚನ ನೀಡಿದರು. ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ ಸಂಗೀತ ಸೇವೆ ಸಲ್ಲಿಸಿದರು.

ಜ.೨೨ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಡೆಯಲಿದ್ದು, ಅಂದೇ ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
| ಡಾ.ಮುರುಘರಾಜೇಂದ್ರ ಸ್ವಾಮೀಜಿ, ಪೀಠಾಧಿಪತಿ, ಮುಗಳಖೋಡ-ಜಿಡಗಾ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net