

ಬಳ್ಳಾರಿ: ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ಅಜೀಂ ಪ್ರೇಮ್‌ಜೀ ಫೌಂಡೇಷನ್(ಎಪಿಎಫ್), ಹೋಮ್ ಕ್ವಾರಂಟೈನ್‌ನಲ್ಲಿರುವ ಶಂಕಿತರಿಗೆ 2 ಸಾವಿರ ಕಂಫರ್ಟ್ ಕಿಟ್ ಒದಗಿಸಲು ಮುಂದೆ ಬಂದಿದೆ. ಮೊದಲ ಹಂತದಲ್ಲಿ 500 ಕಿಟ್‌ಗಳನ್ನು ಫೌಂಡೇಷನ್ ಜಿಲ್ಲಾ ಸಮನ್ವಯಾಧಿಕಾರಿ ಉದಯಕುಮಾರ್ ಬೆಕಲ್ ಹಾಗೂ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಹಸ್ತಾಂತರಿಸಿದರು. ಪ್ರತಿ ಕಿಟ್ 2 ಬೆಡ್ ಶೀಟ್, ಬಾತ್ ಟವಲ್, ಟೂತ್‌ಪೇಸ್ಟ್, ಬ್ರಷ್, ಕೊಕೊನಟ್ ಆಯಿಲ್, ರಿನ್ ಸೋಪ್, ಬಾತ್ ಸೋಪ್, ಮಾಸ್ಕ್, ಪ್ಯಾಕೇಜಿಂಗ್, 6 ಕರವಸ್ತ್ರ ಹಾಗೂ 10 ಬಿಸ್ಕತ್ ಪ್ಯಾಕೇಟ್ ಒಳಗೊಂಡಿದೆ.