ಅಯ್ಯಪ್ಪಸ್ವಾಮಿ ಪೂಜೆ, ಅಂಬಾರಿ ಮೆರವಣಿಗೆ

God+Manikandan
Published on

ಧಾರವಾಡ: ನಗರದ ಧರ್ಮಶಾಸ್ತ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಶ್ರೀ ಅಯ್ಯಪ್ಪಸ್ವಾಮಿ ಪೂಜೆ ಹಾಗೂ ಅಂಬಾರಿ ಮೆರವಣಿಗೆಯನ್ನು ಡಿ. 17ರಂದು ಆಯೋಜಿಸಲಾಗಿದೆ ಎಂದು ಸಮಿತಿ ಸಂಸ್ಥಾಪಕ ರಮೇಶ ಪಾತ್ರೋಟ ಗುರುಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯÁರಿಂದಲೂ ಸಹಾಯ ಬಯಸದೆ ನನ್ನ ಕಾಯಕದಿಂದ ಬಂದ ಹಣದಿಂದ ಕಳೆದ ೨೯ ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಅಯ್ಯಪ್ಪನ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಉತ್ಸವ ನಡೆಸುತ್ತಿದ್ದೇನೆ. ಭಕ್ತರ ಇಷ್ಠಾರ್ಥಗಳ ಸಿದ್ಧಿಗಾಗಿ ನನ್ನ ನಿವಾಸದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ ಕಲ್ಪಿಸಿಕೊಡಲಾಗಿದೆ ಎಂದರು.
ಇಲ್ಲಿನ ರೆವಿನ್ಯು ಕಾಲನಿಯ ಶ್ರೀ ಸಿದ್ಧಾರೂಢ ಮಠದ ಬಳಿಯ ಶ್ರೀ ಧರ್ಮಶಾಸ್ತ ಸೇವಾ ಸಮಿತಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ೧೭ರಂದು ಬೆಳಗ್ಗೆ ಉಡುಪಿಯ ಶ್ರೀಧರ ಭಟ್ಟ ಅವರಿಂದ ಚಂಡಿಕಾ ಹೋಮ ಮತ್ತು ಅಭಿಷೇಕ ಹಾಗೂ ಕುಂಭ ಮೆರವಣಿಗೆ, ಭಜನಾ ಕಾರ್ಯಕ್ರಮ ಮತ್ತು ಪೂಜಾ ವಿಽವಿಧಾನಗಳು ನೆರವೇರಲಿವೆ. ನಂತರ ಮಧ್ಯಾಹ್ನ ೩ ಗಂಟೆಗೆ ದೇವಸ್ಥಾನದಿಂದ ಬೃಹತ್ ರಥ, ಕಲಾ ತಂಡಗಳು, ೧೦ಕ್ಕೂ ಹೆಚ್ಚು ವಾಧ್ಯ ಮತ್ತು ಕುಂಭ ಮೆರವಣಿಗೆಯೊಂದಿಗೆ ಅಯ್ಯಪ್ಪ ಸ್ವಾಮಿ ಮೆರವಣಿಗೆ ಹೊರಡಲಿದೆ. ರೆವಿನ್ಯು ಕಾಲನಿಯಿಂದ ಸಾಯಿ ಮಂದಿರ ರಸ್ತೆ, ದಾಸನಕೊಪ್ಪ ಸರ್ಕಲ್, ಸಪ್ತಾಪೂರ, ಜಯನಗರ, ಶ್ರೀನಗರ, ಶಕ್ತಿ ಕಾಲನಿ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಲಿದೆ ಎಂದರು.
ಸಿದ್ಧಾರೂಢ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ತೆಂಕಲಗೂಡ ಮಠದ ಶ್ರೀ ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆ ಉದ್ಘಾಟನಾ ಸಮÁರಂಭದ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮÁ್ಮಯಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು ಎಂದರು.
ಅ0ದಾಜು 10 ಸಾವಿರ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net