ಅಯ್ಯಪ್ಪಸ್ವಾಮಿ ಮಹಾಪೂಜೆ ನಾಡಿದ್ದು

Ayyappa
Published on

ಕೊಳವಿ: ಸಮೀಪದ ಮಮದಾಪುರ ಗ್ರಾಮದ ಶ್ರೀ ಚರಮೂರ್ತೇಶ್ವರ ಮಹಾಮಠದಲ್ಲಿ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಡಿ.24ರಂದು ಜರುಗಲಿದೆ.

ಸಂಜೆ 4 ಗಂಟೆಗೆ ಮಾಲಾಧಾರಿಗಳನ್ನು ಬರಮಾಡಿಕೊಳ್ಳುವುದು, ಸಂಜೆ 6ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಮೂರ್ತಿಗೆ ರುದ್ರಾಭಿಷೇಕ ನೆರವೇರುವುದು. ನೇತೃತ್ವವನ್ನು ಶೇಖರ ಗುರುಸ್ವಾಮಿ, ಜತ್ತಿ ಗುರುಸ್ವಾಮಿ, ಈರಣ್ಣ ಗುರುಸ್ವಾಮಿ, ಮಾದೇವ ಗುರುಸ್ವಾಮಿ, ಅಶೋಕ ಗುರುಸ್ವಾಮಿ, ಉಪ್ಪಾರ ಹಟ್ಟಿ, ಬೆಟಗೇರಿ ಗುರುಸ್ವಾಮಿ, ತಪಸಿ ಗುರುಸ್ವಾಮಿ, ಅಜ್ಜನಕಟ್ಟಿ ಗುರುಸ್ವಾಮಿ, ಹಿರೇನಂದಿ ಗುರುಸ್ವಾಮಿ, ಕೊಳವಿ ಗುರುಸ್ವಾಮಿ ವಹಿಸುವರು.

ಅಂಕಲಗಿ- ಕುಂದರಗಿ ಶ್ರೀ ಅಡಿವಿ ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ, ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಶಾಂತರೂಢ ಸ್ವಾಮೀಜಿ, ಚರಮೂರ್ತೇಶ್ವರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net