

ಮಮದಾಪುರ: ಗ್ರಾಮದ ಚರಮೂರ್ತೇಶ್ವರ ಮಹಾಮಠದಲ್ಲಿ ಮಂಗಳವಾರ ಅಯ್ಯಪ್ಪ ಸ್ವಾಮಿ ಸೇವಾ ಸೇವಾ ಸಮಿತಿ ಆಶ್ರಯದಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ ನೆರವೇರಿತು. ಸಂಜೆ ಜ್ಯೋತಿ ಹಾಗೂ ಕುಂಭಮೇಳ ಮೆರವಣಿಗೆಗೆ ಚರಮೂರ್ತಿಶ್ವರ ಸ್ವಾಮೀಜಿ, ಶೇಖರ ಗುರುಸ್ವಾಮಿಗಳು ಚಾಲನೆ ನೀಡಿದರು.
ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರಮೂರ್ತೇಶ್ವರ ಮಠಕ್ಕೆ ಆಗಮಿಸಿದರು. ಅಯ್ಯಪ್ಪ ಸ್ವಾಮಿ ಮಂಟಪದಲ್ಲಿ ಮಹಾಪೂಜೆಯನ್ನು ಡಾ. ಸಿದ್ದಲಿಂಗ ದೇವರು, ಗುರುಸ್ವಾಮಿಗಳಾದ ಶೇಖರ ಗುರುಸ್ವಾಮಿ, ಸುರೇಶ ದೇಮಶೆಟ್ಟಿ ಗುರುಸ್ವಾಮಿ, ಮಹಾದೇವ ಗುರುಸ್ವಾಮಿ ನೆರವೇರಿಸಿದರು. ಡಾ.ಸಿದ್ದಲಿಂಗ ದೇವರು ಮಾತನಾಡಿ, ಭಾರತೀಯ ತತ್ತ್ವಜ್ಞಾನದಲ್ಲಿ ಇಂದ್ರಿಯ ನಿಗ್ರಹಕ್ಕೆ ಒತ್ತು ಕೊಡಲಾಗಿದೆ. ಅದು ಮೋದ ದಾರಿ ಎಂದರು. ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಕಾರ್ತಿಕ ಗುರುಸ್ವಾಮಿ, ಮಹಾಂತೇಶ ಗುರುಸ್ವಾಮಿ, ಈಶ್ವರ ಗುರುಸ್ವಾಮಿ, ಈರಣ್ಣ ಗುರುಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಗ್ರಾಪಂ ಸದಸ್ಯರಾದ ಸುರೇಶ ಸನದಿ, ಕೆಂಪಣ್ಣ ಮೆಲನ್ನವರ, ಆನಂದ ಕೊಣ್ಣೂರ ಇತರರು ಇದ್ದರು.