ಅಯ್ಯಪ್ಪಸ್ವಾಮಿ ಜನಜಾಗೃತಿ ಧರ್ಮಸಭೆ ಜ.1ಕ್ಕೆ

31bhr 6 sri
Published on

ಬಾಳೆಹೊನ್ನೂರು: ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಜನವರಿ 1ರಂದು 32ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅನ್ನದಾನ, ದೀಪೋತ್ಸವ, ರಾಜಬೀದಿ ಉತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.

ಜ.1ರಂದು ಬೆಳಿಗ್ಗೆ ಭದ್ರಾ ನದಿಯಿಂದ ಕನ್ನಿಸ್ವಾಮಿಗಳು ಆಗ್ರೋದಕ ತರುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಬೆಳಗ್ಗೆ 11.30ರಿಂದ ಶ್ರೀಪ್ರಸನ್ನಗಣಪತಿ ಕಲಾ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಧ್ಯಾಹ್ನ ಮಹಾಪೂಜೆ, ಸಂಜೆ 5 ಗಂಟೆಯಿಂದ ಅಯ್ಯಪ್ಪ ಸ್ವಾಮಿ ರಾಜಬೀದಿ ಮೆರವಣಿಗೆ, ಸಂಜೆ 7 ಗಂಟೆಗೆ ನಡೆಯುವ ಜನಜಾಗೃತಿ ಧಾರ್ಮಿಕ ಸಭೆಯಲ್ಲಿ ಸೊರಬದ ದೊಡ್ಡತಲಗಡ್ಡೆಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಿರೇಮಗಳೂರು ಕಣ್ಣನ್ ಅವರು. ಅಯ್ಯಪ್ಪ ಸ್ವಾಮಿಗೆ ಕನ್ನಡ ಮಂತ್ರಘೋಷಗಳನ್ನು ಮಾಡಲಿದ್ದಾರೆ.

ಆರ್.ಡಿ.ರವೀಂದ್ರಗೆ ಅಯ್ಯಪ್ಪ ಅನುಗ್ರಹದ ವಿದ್ಯಾರತ್ನ ಪ್ರಶಸ್ತಿ ಹಾಗೂ ನಟ ಕಾಫಿ ಗಿರಿಗೆ ಕಲಾರತ್ನ ಪ್ರಶಸ್ತಿ ಸನ್ಮಾನಿಸಲಾಗುವುದು. 18ನೇ ವರ್ಷ ಶಬರಿಮಲೆ ಯಾತ್ರೆ ಕೈಗೊಂಡಿರುವ ಮಾಲಾಧಾರಿಗಳು, ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು. ಸ್ಫೂರ್ತಿಉಮೇಶ್ ಹಾಗೂ ಸಾನ್ವಿಕ ಹರೀಶ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net