ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ

Untitled design
ತಾವರಗೇರಾದ ಶಾಮೀದಲಿ ದರ್ಗಾದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಸಮುದಾಯದಿಂದ ಅನ್ನಸಂತರ್ಪಣೆ ಮಾಡಲಾಯಿತು.
Published on

ತಾವರಗೇರಾ: ಪಟ್ಟಣದ ಶ್ಯಾಮೀದ ಅಲಿ ದರ್ಗಾದ ಆವರಣದಲ್ಲಿ 287 ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಶುಕ್ರವಾರ ಮುಸ್ಲಿಂ ಸಮುದಾಯ ಅನ್ನಸಂತರ್ಪಣೆ ಏರ್ಪಡಿಸಿ ಸೌಹಾರ್ದತೆ ಮೆರೆದಿದೆ.


ಪಟ್ಟಣದಲ್ಲಿ ಮೊದಲಿನಿಂದಲೂ ಹಿಂದು, ಮುಸ್ಲಿಂ ಸಮುದಾಯದವರು ಸೌಹಾರ್ದತೆಗೆ ಹೆಸರಾಗಿದ್ದಾರೆ. ಉರುಸು, ಮೊಹರಂ, ರಂಜಾನ್, ಈದ್ ಮಿಲಾದ್, ಮಹಮ್ಮದ್ ಪೈಗಂಬರ್ ಜಯಂತಿ ಹಬ್ಬಗಳಲ್ಲಿ ಹಿಂದುಗಳು ಭಾಗವಹಿಸಿದರೆ, ಗಣೇಶ ಚತುರ್ಥಿ , ವಿಜಯದಶಮಿ, ದೀಪಾವಳಿ, ಮಕರ ಸಂಕ್ರಮಣ ಹಬ್ಬಗಳಲ್ಲಿ ಮುಸ್ಲಿಂ ಸಮುದಾಯದ ಯುವಕರು ಸಹ ಪಾಲ್ಗೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಮಾದರಿಯಾಗಿದ್ದಾರೆ.


ರಾಜಾಬಾಗ್ ಸವಾರ ನೌಜವಾನ್ ಕಮಿಟಿ ಪದಾಧಿಕಾರಿಗಳಾದ ಖಾಜಾನಾಯಕ, ಇಲಿಯಾಸ ನಾಲಬಂದ್, ಅಯ್ಯಪ್ಪ ಗುರುಸ್ವಾಮಿಗಳಾದ ಪ್ರಶಾಂತ ಗುರುಸ್ವಾಮಿ, ಯಂಕನಗೌಡ, ಅಶೋಕ, ಮೌನೇಶ, ವಿರೇಶ, ಅಮರೇಶ, ಸಿದ್ದಣ್ಣ , ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net