ಸಂಸತಿ, ಸಂಸ್ಕಾರ ಹೊಂದಿದ್ದ ಅಯ್ಯಪ್ಪನ್​

Untitled-4
ಕೃಷಿ ವಿಜ್ಞಾನಿ ಪದ್ಮಶ್ರೀ ಎಸ್​.ಅಯ್ಯಪ್ಪನ್​ ಅವರ ನಿಧನಕ್ಕೆ ವಿಜಯಪುರದ ಎಸ್​ಎನ್​ ಫಾಮ್​ರ್ ಹೌಸ್​ನ ಕುಂಬಿಗಲ್​ ಕುಟೀರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತೋಟಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಸಂತೆ ನಾರಾಯಣಸ್ವಾಮಿ, ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ವಿಎಂ ಕಿಶೋರ್​ ಕುಮಾರ್​,ಕಾರ್ಯದರ್ಶಿ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಂ.ಶಿವಕುಮಾರ್​, ಅನಿವಾಸಿ ಭಾರತೀಯ ಶಂಕರ್​ ಇದ್ದರು.
Published on

ವಿಜಯಪುರ : ಸರಳ, ಸಂಸತಿ, ಸಂಸ್ಕಾರ ಹೊಂದಿದ್ದ, ಇತರರ ಬಗ್ಗೆ ಸದಾ ಗೌರವದಿಂದ ಕೂಡಿದ್ದ, ಕಡು ಬಡತನದಿಂದ ಬಂದಿದ್ದರೂ, ಉನ್ನತ ಸ್ಥಾನಕ್ಕೇರಿದ್ದರೂ ತನ್ನವರನ್ನು ಮರೆಯದ ಪ್ರಾಮಾಣಿಕ ವ್ಯಕ್ತಿ ಪದ್ಮಶ್ರೀ ಎಸ್​.ಅಯ್ಯಪ್ಪನ್​ ಅವರ ಅಗಲಿಕೆ ದೇಶದ ಕೃಷಿ ೇತ್ರಕ್ಕೆ ನಷ್ಟ ತಂದಿದೆ ಎಂದು ತೋಟಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಸಂತೆ ನಾರಾಯಣಸ್ವಾಮಿ ಕಂಬನಿ ಮಿಡಿದರು.

ಎಸ್​.ಎನ್​. ಫಾಮ್​ರ್ ಹೌಸ್​ನ ಕುಂಬಿಗಲ್​ ಕುಟೀರದಲ್ಲಿ ಪದ್ಮಶ್ರೀ ಎಸ್​.ಅಯ್ಯಪ್ಪನ್​ ಅವರಿಗೆ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂ ಹಾಗೂ ಸೀನಿಯರ್​ ಛೇಂಬರ್​ ಮತ್ತು ಶರಣ ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಅಯ್ಯಪ್ಪನ್​ ಅವರು ಬಡತನದ ಪರಿಣಾಮ ಬೆಂಗಳೂರಿನ ಕೃಷಿ ಕಾಲೇಜಿಗೆ ಪಂಚೆಯುಟ್ಟು ಬರುತ್ತಿದ್ದರು. ಸ್ವಸಾಮರ್ಥ್ಯದಿಂದ ಮಂಗಳೂರಿನ ಫಿಶರಿ ಸೈನ್ಸ್​ನಲ್ಲಿ ಎಂಎಸ್​ಸಿ ಎಜಿ ಪೂರ್ಣಗೊಳಿಸಿ, ಕೇಂದ್ರದ ಒಡಿಸ್ಸಾ ವಿವಿಯಲ್ಲಿ ಉಪನಿರ್ದೇಶಕರಾಗಿದ್ದರು. ನಂತರ ದೆಹಲಿಯ ಕೃಷಿ ಅನುಸಂಧಾನ ಪರಿಷತ್ತಿನ ಟಿಸಿಎಆರ್​ನಲ್ಲಿ ಡೈರೆಕ್ಟರ್​ ಜನರಲ್​, ಬಳಿಕ ದೆಹಲಿಯಲ್ಲಿ ಕೃಷಿ ಕಾರ್ಯದರ್ಶಿ, ನಿರ್ದೇಶಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತವಲಯದಲ್ಲಿ ಹೆಸರು ಮಾಡಿದರು ಎಂದು ಸ್ಮರಿಸಿದರು.

ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಚಂದ್ರಶೇಖರ್​ ಹಡಪದ ಮಾತನಾಡಿ, ಹತ್ತಾರು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅಯ್ಯಪ್ಪನ್​ ಅವರು ಹೊರದೇಶಗಳಲ್ಲೂ ಕೃಷಿ ಬಗ್ಗೆ ಪ್ರಭುತ್ವಪೂರ್ವ ಉಪನ್ಯಾಸ ನೀಡಿದ್ದಾರೆ ಎಂದು ನೆನಪಿಸಿಕೊಂಡರು. ರೈತರಾದ ವೆಂಕಟರಮಣಪ್ಪ, ಸೀನಿಯರ್​ ಚೇಂಬರ್​ನ ಅಧ್ಯಕ್ಷ ಅನೀಸ್​ ಉರ್​ ರಹಮಾನ್​, ಟೌನ್​ ಕಾಂಗ್ರೆಸ್​ ಅಧ್ಯಕ್ಷ ನಾಗರಾಜು, ಮಂಜುನಾಥ್​, ವಕೀಲ ಜಯರಾಮ್​, ಮಹಂತಿನ ಮಠದ ಕಾರ್ಯದರ್ಶಿ ವಿಶ್ವನಾಥ್, ಮುರಳಿಧರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net