

ಹುಬ್ಬಳ್ಳಿ: ಇಲ್ಲಿಯ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 11ನೇ ವರ್ಷದ ವರ್ಧಂತಿ ಉತ್ಸವವನ್ನು ಏ. 18ರಂದು ಏರ್ಪಡಿಸಲಾಗಿದೆ.
ಶ್ರೀಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಆಶ್ರಯದಲ್ಲಿ ಶ್ರೀಅಯ್ಯಪ್ಪಸ್ವಾಮಿ, ಶ್ರೀಕರಿಯಮ್ಮದೇವಿ ಹಾಗೂ ಪರಿವಾರ ದೇವರುಗಳ ವರ್ಧಂತಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 8.30ಕ್ಕೆ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ ವಾಚನ, ಕಲಶಾಭಿವೃದ್ಧಿ ಹೋಮ, ಪ್ರಧಾನ ಹೋಮಗಳು ನಡೆಯಲಿವೆ. ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ, 11.30ಕ್ಕೆ ಕಳಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ ನಂತರ ಅನ್ನದಾನ ಸೇವೆ ನಡೆಯಲಿದೆ.
ಸಂಜೆ 6ಕ್ಕೆ ರಂಗಪೂಜೆ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಆನಂದ ಗುರುಸ್ವಾಮಿ ಕೋರಿದ್ದಾರೆ.