ಭಗವಂತನ ಸ್ಮರಣೆಗೆ ಶ್ರಾವಣ ಮಾಸ ಸೂಕ್ತ

ayyappa temple
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಶ್ರಾವಣ ಮಾಸ ಹಿಂದುಗಳಿಗೆ ಅತ್ಯಂತ ಪವಿತ್ರವಾಗಿದ್ದು, ಈ ಮಾಸದಲ್ಲಿ ಅಧ್ಯಾತ್ಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪೂಜೆ, ವ್ರತ, ಜಪ-ತಪ, ಯಜ್ಞ-ಯಾಗಾದಿ, ಅನ್ನ ಸಂತರ್ಪಣೆ, ಭಜನೆಯೊಂದಿಗೆ ಪ್ರತಿ ನಿತ್ಯ ಆ ಭಗವಂತನ ದಿವ್ಯಸ್ಮರಣೆಯ ಮಾಸವಾಗಿದೆ ಎಂದು ಪಟ್ಟಣದ ಅಯ್ಯಪ್ಪ ನಗರದ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದ ಧರ್ಮದರ್ಶಿ ಜೆ.ವಿ.ಮುನಿರಾಜು ತಿಳಿಸಿದರು.
ಪಟ್ಟಣದ ಅಯ್ಯಪ್ಪ ನಗರದ ಪಂಪಾ ಗಣಪತಿ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಮೂರನೇ ಶ್ರಾವಣ ಪ್ರಯುಕ್ತ ಏರ್ಪಡಿಸಿದ್ದ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆಯಲ್ಲಿ ಮಾತನಾಡಿದರು.
ಉಪನ್ಯಾಸಕ ಎಸ್.ಎಸ್.ಪ್ರದೀಪ ಮಾತನಾಡಿ, ಶ್ರಾವಣ ಎಂದರೆ ಆಲಿಸುವುದು ಎಂದರ್ಥ. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನ ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು. ಜತೆಗೆ ಉತ್ತಮ ಕಾರ್ಯ ಆರಂಭಿಸಲು ಈ ಮಾಸ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net