ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ಗೆ ನಿವೇಶನ ನೀಡಿ

mdl ayyappaswamy
ಮುದಗಲ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರಗೆ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಮನವಿ ಸಲ್ಲಿಸಿತು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಅಮರೇಶ ಅಂಗಡಿ ಇತರರಿದ್ದರು.
Published on

ಮುದಗಲ್: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತಂಗಲು ಮತ್ತು ಪೂಜೆ ಕಾರ್ಯಕ್ರಮಗಳಿಗೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನಿಂದ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ಭೋಗಾರಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹೆಚ್ಚುತ್ತಿದ್ದಾರೆ. ಈಗಾಗಲೇ ಹಳೇಪೇಟೆ ರಸ್ತೆಯಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿ ಇದ್ದು ಸ್ಥಳಾವಕಾಶ ಕೊರತೆ ಇದ್ದು, ಸಮಸ್ಯೆಯಾಗುತ್ತಿದೆ. ಆದ್ದರಿಂದ ಪುರಸಭೆಯಿಂದ ನಿವೇಶನ ಮಂಜೂರು ಮಾಡಿದೆರ ಅನುಕೂಲವಾಗಲಿದೆ ಎಂದು ಟ್ರಸ್ಟ್ ಸದಸ್ಯರು ಮನವಿ ಮಾಡಿದರು.

ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ಕಾಂತಕುಮಾರ್ ಪತ್ತಾರ, ವಿಠೋಬ ಯಾಳಗಿ, ಬಸವರಾಜ ಮುದಗಲ್, ರವಿ ಕಟ್ಟಿಮನಿ, ಕೃಷ್ಣಾ ಚಲುವಾದಿ, ವೀರೇಶ ಸುಲ್ತಾನಪುರ, ಶರಣಪ್ಪ ಹಳೇಪೇಟೆ, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net