ಅಮರಗೋಳ ಅಯ್ಯಪ್ಪ ದೇವಸ್ಥಾನ ಲೋಕಾರ್ಪಣೆ

Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಆಶ್ರಯ ಕಾಲನಿಯ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಅಯ್ಯಪ್ಪಸ್ವಾಮಿ, ಗಣಪತಿ, ಷಣ್ಮುಖ ಸ್ವಾಮಿಗಳ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರದ ಕಳಸಾರೋಹಣ ಸಮಾರಂಭ ಡಿ. 26ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.

ಗೋಕುಲದ ಮೋಹನ ಗುರುಸ್ವಾಮಿ, ಗುರುಸಿದ್ದಯ್ಯ ಗುರುಸ್ವಾಮಿ ನೇತೃತ್ವ ವಹಿಸುವರು.

ಡಿ. 26ರಂದು ಬೆಳಗ್ಗೆ 10ಕ್ಕೆ ನೂತನ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಲಿದ್ದು, ಕುಂಭಮೇಳ, ಪಲ್ಲಕ್ಕಿ ಉತ್ಸವ, ಸಕಲ ವಾದ್ಯ ಮೇಳದೊಂದಿಗೆ ನಡೆಯಲಿದೆ. ಸಂಜೆ 7ಕ್ಕೆ ಪ್ರವಚನ ನಡೆಯಲಿದ್ದು, ಭೈರನಹಟ್ಟಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಜ್ಜಪ್ಪ ಹೊರಕೇರಿ, ಶಾಂತಪ್ಪ ದೇವಕ್ಕಿ, ಸಿದ್ದಪ್ಪಜ್ಜನ ಮಠ ಭಕ್ತ ಮಂಡಳಿ ಅಧ್ಯಕ್ಷ ಕಲ್ಲನಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net