ಅಯ್ಯಪ್ಪಸ್ವಾಮಿ ಪೂಜೆ ಅನ್ನಸಂತರ್ಪಣೆ

IMG-20241218-WA0018-1.jpg
Published on

ಹುಬ್ಬಳ್ಳಿ: ಇಲ್ಲಿಯ ರಾಧಾಕೃಷ್ಣ ಗಲ್ಲಿಯ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಗುರುಸ್ವಾಮಿಗಳಾದ ಮಲ್ಲೇಶ ಬೆಟಗೇರಿ ಅವರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಘಂಟಿಕೇರಿ ಠಾಣೆ ಇನ್ಸಪೆಕ್ಟರ್ ಜಾಧವ, ಮೊಮಾಯ ಟ್ರಾನ್ಸಪೋರ್ಟ್ ಮಾಲೀಕ ವೈಭವ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು.

ಶಶಿಕಾಂತ ಬಿಜವಾಡ ಹಾಗೂ ಮಾಲಾಧಾರಿಗಳಾದ ಗಂಗಾಧರ ಭೂರೆ, ಯಲ್ಲಪ್ಪ ಹಂಜಿಗಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net