ಅಯ್ಯಪ್ಪ ಸ್ವಾಮಿ ಆಭರಣ ಮೆರವಣಿಗೆ 13ಕ್ಕೆ

CTD 25 AYAPPA SWAMI (1)-03
Published on

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ 23ನೇ ವರ್ಷದ ಮಹಾ ಅನ್ನದಾನ ಕಾರ‌್ಯಕ್ರಮಕ್ಕೆ ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ ಚಾಲನೆ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ಶರಣ್‌ಕುಮಾರ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ಸೂರಪ್ಪ, ಕಾರ‌್ಯದರ್ಶಿ ವೆಂಕಟೇಶ, ಡಾ.ಹನುಮಂತರೆಡ್ಡಿ, ಉದಯಕುಮಾರ್‌ಶೆಟ್ಟಿ, ರೇಷ್ಮೆ ಮಂಜುನಾಥ್, ಚಂದ್ರಶೇಖರ್, ಇಂದ್ರಣ್ಣ, ವಿ.ಜಿ.ಮೋಹನ್ ಕುಮಾರ್,ತಿಮ್ಮಣ್ಣ ಮತ್ತಿತರರು ಇದ್ದರು. ಸಾವಿರಾರು ಭಕ್ತರು, ಮಾಲಾಧಾರಿಗಳು ಭಾಗವಹಿಸಿದ್ದರು.

ಸ್ವಾಮಿ ಆಭರಣ ಮೆರವಣಿಗೆ

ಜ.13ರ ಸಂಜೆ 5.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ಅಭರಣಗಳ ಮೆರವಣಿಗೆ ನಡೆಯಲಿದೆ. 14ರ ಶನಿವಾರ ಸಂಜೆ 5.30ಕ್ಕೆ ಮಕರ ಸಂಕ್ರಮಣದ ಅಂಗವಾಗಿ ಸ್ವಾಮಿ ಸನ್ನಿಧಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಾಲಯ ಸಮಿತಿ ಕೋರಿದೆ. ದೀಪೋತ್ಸವದ ಕುರಿತು ಹೆಚ್ಚಿನ ಮಾಹಿತಿಗೆ ಮಿಠಾಯಿ ಮುರುಗೇಶ್ (9449682119) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net