

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಕಲ್ಯಾಣಕ್ಕಾಗಿ 29 ವರ್ಷಗಳಿಂದ ವರ್ಷವಿಡೀ ಸ್ವಾಮಿ ಅಯ್ಯಪ್ಪನ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಶ್ರೀ ಧರ್ಮಶಾಸ್ತ ಸೇವಾ ಸಮಿತಿಯಿಂದ ಡಿ. 22ರಂದು ಸ್ವಾಮಿ ಅಯ್ಯಪ್ಪ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸಮಿತಿ ಸಂಸ್ಥಾಪಕ ಶ್ರೀ ರಮೇಶ ಪಾತ್ರೋಟ ಗುರುಸ್ವಾಮೀಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 5.30ರಿಂದ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಮದ್ಯಾಹ್ನ 12ಕ್ಕೆ ಜ್ಯೂನಿಯರ್ ರಾಜಕುಮಾರ್ ಹಾಗೂ ಜ್ಯೂನಿಯರ್ ಪುನೀತ ರಾಜಕುಮಾರ್ ಅವರಿಂದ ಅಯ್ಯಪ್ಪನ ಭಕ್ತಿಗೀತೆ, ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಅಯ್ಯಪ್ಪ ಸ್ವಾಮಿಯ ಅಂಬಾರಿ ಮೆರವಣಿಗೆ ಹೊರಡಲಿದೆ. ಶಾಸಕರಾದ ಅರವಿಂದ ಬೆಲ್ಲದ ಹಾಗೂ ಎನ್.ಎಚ್. ಕೋನರಡ್ಡಿ ಚಾಲನೆ ನೀಡುವರು. ಶ್ರೀ ಸಾಯಿ ಮಂದಿರ ಅಧ್ಯಕ್ಷ ಮಹೇಶ ಶೆಟ್ಟಿ ಪಡಿಪೂಜೆ ನೆರವೇರಿಸುವರು. ಮೆರವಣಿಗೆಯು ರೆವಿನ್ಯೂ ಕಾಲನಿಯಿಂದ ಹೊರಟು ಸಾಯಿ ಮಂದಿರ, ದಾಸನಕೊಪ್ಪ ವೃತ್ತ, ಸಪ್ತಾಪುರ ಬಾವಿ, ಜಯನಗರ, ಶ್ರೀನಗರ, ಶಕ್ತಿ ಕಾಲನಿ ಮಾರ್ಗವಾಗಿ ಸಂಚರಿಸಿ ಸನ್ನಿಽಗೆ ಮರಳಲಿದೆ ಎಂದರು.
ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರಂಭದ ಸಾನ್ನಿಧ್ಯವನ್ನು ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಾರೂಢ ಮಠದ ಶ್ರೀ ಮಾದವಾನಂದ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ವಹಿಸುವರು. ಕೇಂದ್ರ ಸಚಿವ ಪಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಮಾರಂಭ ಉದ್ಘಾಟಿಸುವರು ಎಂದರು.
ಉದಯ ಶೆಟ್ಟಿ, ಆರ್.ಬಿ. ಪಾಟೀಲ, ಮಹಾಂತೇಶ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.