

ಹುಬ್ಬಳ್ಳಿ: ಇಲ್ಲಿಯ ಶಬರಿನಗರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬಿಲ್ವಾರ್ಚನೆ, ಗುರುವಂದನೆ ಹಾಗೂ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ಧರ್ಮಾಧಿಕಾರಿ ಡಾ. ಮೋಹನ ಗುರುಸ್ವಾಮಿ ನೇತೃತ್ವದಲ್ಲಿ ಜರುಗಿದವು.
ಅಯ್ಯಪ್ಪಸ್ವಾಮಿಗೆ ಮಹಾಭಿಷೇಕ, ಪುಷ್ಪಾಭಿಷೇಕ, ಪಡಿಪೂಜೆ, ಮಹಾಮಂಗಳಾರತಿ, ಭಕ್ತರಿಂದ ಕುದಿಯುವ ಎಣ್ಣೆ ಸೇವೆ, ಸೇವಾಕರ್ತರಿಗೆ ಸನ್ಮಾನ, ಅನ್ನಸಂತರ್ಪಣೆಗಳು ನಡೆದವು.
ಕುಂದಗೋಳ ಕಲ್ಯಾಣಪುರಮಠದ ಅಭಿನವ ಶ್ರೀ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು.