ಅಯ್ಯಪ್ಪ ಮಂದಿರ ಲೋಕಾರ್ಪಣೆ ಆಮಂತ್ರಣ ಬಿಡುಗಡೆ

Btw_Ayyappa Mandir
Published on

ಬಂಟ್ವಾಳ: ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಲೋಕಾರ್ಪಣೆ ಹಾಗೂ ದೇವರ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಜ.18 ಹಾಗೂ 19ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.

ಬೆಂಜನಪದವು ಶ್ರೀ ಭದ್ರಾಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಅಯ್ಯಪ್ಪ ದೇವರ ಕೃಪೆಯಿಂದ ಸಮಸ್ತ ಜನರ ಕಷ್ಟ, ದೋಷಗಳು ನಿವಾರಣೆಯಾಗಿ ಸಮಾಜದಲ್ಲಿ ಸುಭಿಕ್ಷೆಯಾಗಲಿ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಳ್ಳಿಗೆ ಗ್ರಾ.ಪಂ. ಸದಸ್ಯೆ ರೇಷ್ಮಾ ಸತೀಶ್, ಆಡಳಿತ ಟ್ರಸ್ಟ್‌ನ ಅಧ್ಯಕ್ಷ ಪ್ರವೀಣ್ ಬೆಂಜನಪದವು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ದಿಲೀಪ್ ಪಕ್ಕೊಳಿಮಾರ್, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಜ್ ಶರ್ಮ, ಮಹಿಳಾ ಸಮಿತಿಯ ಅಧ್ಯಕ್ಷೆ ಭವ್ಯ ಪ್ರವೀಣ್ ಬೆಂಜನಪದವು, ಲೋಕೇಶ್ ರಾಮನಗರ, ಗೀತಾ ದಿನೇಶ ರಾಮನಗರ, ಉದಯ ಕುಮಾರ್ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net