

ರಾಯಚೂರು ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ೦೬ ರಂದು ನಡೆಯಲಿದ್ದು, ಸಮ್ಮೇಳದ ಸವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಅಯ್ಯಪ್ಪ ಹುಡಾ ಅವರನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಮ್ಮೇಳನವು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ನಡೆಯದಲಿದ್ದು, ಉದ್ಘಾಟನೆಯನ್ನು ಹಿರಿಯ ಸಾಹಿತಿ ನಾಡೋಜ ಡಾ.ಗೋ.ರು. ಚೆನ್ನಬಸಪ್ಪನವರು ನೆವೇರಿಸಲಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆ, ಕರ್ನಾಟಕ ಏಕೀರಣ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಗತಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಽಯಲ್ಲಿ ಶ್ರೇಷ್ಠ ಮಹನೀಯರ ಅಧ್ಯಕ್ಷತೆಗಳ ನಡೆಸಿರುವ ಸಮ್ಮೇಳನಗಳ ಕೊಡುಗೆ ಚಾರಿತ್ರಿಕ ಮಹತ್ವವನ್ನು ಪರಿಷತ್ತು ಆಚರಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಆಸಕ್ತರು,ಸಾಹಿತಿಗಳು ಕನ್ನಡ ಪ್ರೇಮಿಗಳು,ಕನ್ನಡ ಪರ ಹೋರಾಟಗಾರರು ಸಾರ್ವಜನಿಕರು ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದಿರ್ಶಿ ರೇಖಾ ಬಡಿಗೇರ್, ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್, ಶಿವರಾಜ್, ಪ್ರತಿಭಾ ಗೋನಾಳ, ದೇವೇಂದ್ರಮ್ಮ, ಅನ್ವರ್ ಅಲಿಖಾನ್, ಸಾಯಿ ಸಾಗರ ಇದ್ದರು.