

ಮಡಿಕೇರಿ: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಬೆಳಗ್ಗೆ ೬ ಗಂಟೆಯಿಂದ ಗಣಪತಿ ಹೋಮ, ಅಷ್ಟಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿತು. ಪಾಲಕೊಂಬು ಪ್ರತಿಷ್ಠಾಪನೆ, ಚಂಡೆಸೇವೆ ನಡೆಯಿತು. ಸಂಜೆ ೪ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ನಗರದ ಶಾಂತಿನಿಕೇತನಿಂದ ಜನರಲ್ ತಿಮ್ಮಯ್ಯ ವೃತ್ತ, ನಗರದ ಪೊಲೀಸ್ ಠಾಣೆ, ಇಂದಿರಾಗಾಂಧಿ ವೃತ್ತವಾಗಿ ಮುಖ್ಯ ಬೀದಿಗಳಲ್ಲಿ ಚಂಡೆ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಸಂಜೆ ದೀಪಾರಾಧನೆ, ಅಲಂಕಾರ ಪೂಜೆ, ಪಡಿ ರಂಗಪೂಜೆ, ದುರ್ಗಾಪೂಜೆ, ಸುಬ್ರಹ್ಮಣ್ಯ ಪೂಜೆ, ಮಹಾಪೂಜೆ ನಡೆಯಿತು. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದರೆ, ರಾತ್ರಿ ೧೨ ಗಂಟೆಯಿಂದ ೨ ಗಂಟೆಯವರೆಗೆ ಅಗ್ನಿಪೂಜೆ, ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡ ನಡೆಯಿತು.