ಅಸ್ಪಶ್ಯರ ಪರವಾಗಿ ಹೋರಾಡಿದ ನಾಯಕ ಅಯ್ಯನ್ ಕಾಳಿ: ಡಾ.ಚಂದ್ರಮೌಳಿ ಬಣ್ಣನೆ

16
Published on

ಮೈಸೂರು: ದಲಿತ ನಾಯಕ ಅಯ್ಯನ್ ಕಾಳಿ ಅವರು ಕೇರಳದ್ಯಾಂತ ಅಸ್ಪಶ್ಯರ ಪರವಾಗಿ ಹೋರಾಡಿ ಹರಿಜನ ನಾಯಕರಾಗಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನದ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ ಬಣ್ಣಿಸಿದರು.

ಭೀಮ ಬಲ ಬಳಗದಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಾಂತಿಕಾರಿ ಅಂ್ಯುನ್ ಕಾಳಿ ಅವರ 162ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇಲ್ಜಾತಿಗಳ ವಿರುದ್ಧ ಅವಿರೋಧದ ಚಳವಳಿ ಕಟ್ಟಿದ್ದ ದಲಿತ ಹೋರಾಟಗಾರ ಅಯ್ಯನ್ ಕಾಳಿ, ದಲಿತರ ಶಿಕ್ಷಣಕ್ಕಾಗಿ ಹೋರಾಡಿ ತನ್ನ ಜೀವನವನ್ನೇ ಪಣಕ್ಕಿಟ್ಟರು. ಅಸ್ಪಶ್ಯರು ಮರಣ ತೆರಿಗೆಯನ್ನು ಕಟ್ಟುವ ಪರಿಸ್ಥಿತಿ ಇದ್ದುದ್ದರಿಂದ ಪ್ರತಿದಿನವು ಸತ್ತು ಹುಟ್ಟುವ ವಾತಾವರಣದ ವಿರುದ್ಧ ಧ್ವನಿ ಎತ್ತಿದ್ದರು ಎಂದರು.

ಊರಿನಲ್ಲಿ ಅಸ್ಪಶ್ಯರು ಓಡಾಡುವುದು, ದಲಿತ ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ತೊಡುವುದು, ದುಡಿಂುುವ ಜನ ತಮ್ಮ ದುಡಿಮೆಗೆ ತಕ್ಕ ಪ್ರತಿಲವನ್ನು ಕೇಳುವುದು ನಿಷಿದ್ಧವಾಗಿದ್ದ ಕಾಲದಲ್ಲಿ ಇಂತಹ ಅನ್ಯಾಂುಗಳ ವಿರುದ್ಧ ಸಿಡಿದು ನಿಂತಿದ್ದರು ಎಂದು ಹೇಳಿದರು.

ಮೇಲ್ಜಾತಿಗಳ ವಿರುದ್ಧ ಪ್ರತಿರೋಧದ ಚಳವಳಿಂುನ್ನು ಕಟ್ಟಿದವರು ಅಂ್ಯುನ್ ಕಾಳಿ ಅಸ್ಪಶ್ಯರ ಹಕ್ಕುಗಳಿಗಾಗಿ ಬೀದಿಂುಲ್ಲಿ ನಿಂತು ಬಡಿದಾಡಿದ್ದರು. ದೇಶದಲ್ಲಿ ಕಮ್ಯುನಿಸ್ಟ್ ಚಳವಳಿ ಹುಟ್ಟುವುದಕ್ಕೂ ಎಷ್ಟೋ ವರ್ಷ ಮೊದಲೇ ಅಸ್ಪಶ್ಯರು ಸೇರಿದಂತೆ ಎಲ್ಲ ದುಡಿಂುುವ ತಳ ಸಮುದಾಂುಗಳನ್ನು ಒಗ್ಗೂಡಿಸಿ ವರ್ಣ ವ್ಯವಸ್ಥೆಂು ವಿರುದ್ಧ ವರ್ಗ ಹೋರಾಟವನ್ನು ರೂಪಿಸಿದ್ದ ಕ್ರಾಂತಿಕಾರಿ ಎಂದು ಬಣ್ಣಿಸಿದ್ದರು.

ಅಸ್ಪಶ್ಯರ ಹಕ್ಕುಗಳ ಹೋರಾಟಕ್ಕಾಗಿ 1907ರಲ್ಲಿಂೆುೀ ಯುವಜನರ ಸಂಘ ಸ್ಥಾಪಿಸಿ ಕೇರಳ ಮತ್ತು ತಮಿಳುನಾಡಿನಲ್ಲಿ ಇವರು ರೂಪಿಸಿದ್ದ ಹೋರಾಟಗಳು ಚಾರಿತ್ರಿಕವಾದವುಗಳು. ನಿಷೇಧಿಸಲ್ಪಟ್ಟಿದ್ದ ರಸ್ತೆಗಳಲ್ಲಿ ಧೈಂರ್ುದಿಂದ ಎತ್ತಿನ ಗಾಡಿಂುನ್ನು ಓಡಿಸಿ ಈ ನೆಲದಲ್ಲಿ ಘನತೆಯಿಂದ ಬದುಕುವುದು ನನ್ನ ಹಕ್ಕು ಎಂದು ಎದೆಂುುಬ್ಬಿಸಿ ಸಾರಿದ ಧೀರ ಎಂದರು.

19ನೇ ಶತಮಾನದ ಮಧ್ಯಭಾಗದಿಂದ ಅಯ್ಯನ್ ಕಾಳಿ, ಶ್ರೀ ನಾರಾಯಣಗುರು ಸೇರಿದಂತೆ 12 ಜನ ಸಮಾಜ ಸುಧಾರಕರು ಕೇರಳದಲ್ಲಿ ಅಸ್ಪಶ್ಯರ ಸ್ಥಿತಿಗಳನ್ನು ಸುಧಾರಣೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.1904ರಲ್ಲಿ ದಲಿತರಿಗೆ ಶಿಕ್ಷಣ ನೀಡಬೇಕೆಂಬ ಹೋರಾಡಿದ್ದರು ಎಂದರು.

1914ರಲ್ಲಿ ಶಾಲಾ ಪ್ರವೇಶ ಪರಿಹಾರ ದಂಗೆಯಲ್ಲಿ ಸಾವಿರಾರು ಜನ ಮೃತಪಟ್ಟರು. ವ್ಯಂಗನೂರು ಎಂಬ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ದಲಿತರ ಮಕ್ಕಳನ್ನು ಶಾಲೆಗೆ ಸೇರಿಸಲು ಹೋದಾಗ ಆಯ್ಯನ್ ಕಾಳಿ ಮತ್ತು ಜನಗಳನ್ನು ತಡೆದಾಗ ಹೋರಾಟ ನಡೆದು ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದರು.

ವಾಜಿ ಸಚಿವ ಎಚ್.ಕೆ.ಕುವಾರಸ್ವಾಮಿ ವಾತನಾಡಿ, ಬಲ ಸಮುದಾಂುದಲ್ಲಿನ ಬಲ ಕೊರತೆಯಿಂದ ಕಡಿಮೆಂಾಗಿದೆ. ಈ ಕಾರಣದಿಂದ ನಾಗಮೋಹನ್‌ದಾಸ್ ಸದಾಶಿವ ವರದಿ ಬಂದಾಗ ಪ್ರತಿಭಟನೆಂು ಅಗತ್ಯವಿದ್ದರೂ ತಟಸ್ಥರಾಗಿದ್ದವು. ಸಮ ಸಂಖ್ಯೆಂು ಮೀಸಲಾತಿ ಎಂದು ಹೇಳಿದರೂ ಅಲ್ಲಿ ಅಸವಾನತೆ ಇದೆ ಎಂದು ನಾಂುಕರು ತಿಪ್ಪೆ ಸಾರಿಸುವ ಕೆಲಸ ವಾಡಿದ್ದಾರೆ. ಮುಂದೆ ಈ ವಿಚಾರ ರಾಜಕೀಂು ಒಳಮೀಸಲಾತಿಂು ಕಡೆ ತಿರುಗುವುದರಲ್ಲಿ ಸಂದೇಹವಿಲ್ಲ ಎಂದರು.

ಶಿಕ್ಷಕರ ದಿನಾಚರಣೆಂು ಅಂಗವಾಗಿ ಮೈಸೂರು ವಿವಿಂು ದೈಹಿಕ ಶಿಕ್ಷಣ ವಿಭಾಗದ ನಿವೃತ ನಿರ್ದೇಶಕ ಡಾ. ಕೃಷ್ಣಂ್ಯು, ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಎ.ಆರ್. ಕೃಷ್ಣಮೂರ್ತಿ, ವಾಜಿ ಶಾಸಕ ವೈ.ಸಂಪಂಗಿ, ಮೈಸೂರು ವಿವಿಂು ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ಂುುವ ವಿಜ್ಞಾನಿ ಡಾ.ನವೀನ್ ಮೌಂರ್ು, ಮೈಸೂರು ವಿವಿಂು ದಲಿತ ವಿದ್ಯಾರ್ಥಿ ಒಕ್ಕೂಟದ ವಾಜಿ ಅಧ್ಯಕ್ಷ ಸಂದೇಶ ಮಣಗಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net