ನರಗುಂದ: ಪುಣ್ಯಾರಣ್ಯ ಪತ್ರಿವನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಡಾ.ನೀಲಕಂಠ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಗುರುವಾರ ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಶಿಷ್ಯವೃಂದ, ಸದ್ಭಕ್ತರಿಗೆ ಲಿಂಗದೀಕ್ಷೆ, ದೇವಿ ಪುರಾಣ ಪಾರಾಯಣ ಕಾರ್ಯಕ್ರಮ ಜರುಗಿತು. ಬಿ.ಎಂ. ಬೀರನೂರ, ಶಂಕ್ರಪ್ಪ ಹೂಗಾರ ಇತರರು ಇದ್ದರು.