ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ

rbk 17-2 deekshe
ಬನಹಟ್ಟಿಯ ಹಿರೇಮಠದಲ್ಲಿ ನಡೆದ ಲಿಂ. ಶಾಂತವೀರ ಶಿವಾಚಾರ್ಯರ ಸಾಮರಸ್ಯ ಮಂಗಲೋತ್ಸವದಲ್ಲಿ ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ನಡೆಯಿತು.
Published on

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಹಿರೇಮಠದಲ್ಲಿ ಲಿಂ. ಶಾಂತವೀರ ಶಿವಾಚಾರ್ಯರ ಚಿರಲಿಂಗಾಂಗ ಸಾಮರಸ್ಯ ಕಾರ್ಯಕ್ರಮದ ಸಮಾರೋಪದಲ್ಲಿ 30ಕ್ಕೂ ಅಧಿಕ ಜಂಗಮ ವಟುಗಳಿಗೆ ಮಂಗಳವಾರ ಅಯ್ಯಚಾರ ದೀಕ್ಷೆ ನೀಡಲಾಯಿತು.

ಹಿರೇಮಠದ ಶರಣಬಸವ ಶಿವಾಚಾರ್ಯರು ವಟುಗಳಿಗೆ ಮಂತ್ರ ಬೋಧಿಸಿ, ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿದರು.

ಮಂಗಳವಾರ ಪೇಟೆ ದೈವ ಮಂಡಳಿ ಚೇರ್ಮನ್ ಶ್ರೀಶೈಲ ದಭಾಡಿ ಮಾತನಾಡಿ, ಹಿರೇಮಠದಲ್ಲಿ ಪ್ರತಿ ವರ್ಷ ಅಯ್ಯಚಾರ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಜಂಗಮ ಬಂಧುಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಬೆಂಗಳೂರಿನ ಹಿರೇಮಠದ ಅನ್ನದಾನಿ ಸ್ವಾಮೀಜಿ, ದಾನಪ್ಪ ಹುಲಜತ್ತಿ, ಶೇಖರ ಮಾಲಾಪುರ, ಜಗದೀಶಯ್ಯ ಹಿರೇಮಠ, ಶಿವು ಕೊಕಟನೂರ, ಶಶಿಕಾಂತ ಹುನ್ನೂರ, ಬಸವರಾಜ ಬೆಳಗಲಿ, ಶ್ರೀಶೈಲ ಮಠಪತಿ, ಬಸು ಚರ್ಕಿ, ನಿಂಗಯ್ಯ ಮುಧೋಳಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net