ಬ್ಯಾಡಗಿಯಲ್ಲಿ ಜಂಗಮ ವಟುಗಳಿಗೆ ಅಯ್ಯಚಾರ ಏ. 20ರಂದು

ayyacara in byadagi
Published on

ಬ್ಯಾಡಗಿ: ಪಟ್ಟಣದ ಸಂಗಮೇಶ್ವರ ದೇವಸ್ಥಾನದ ರೇಣುಕಾಚಾರ್ಯ ಮಂದಿರದಲ್ಲಿ ಪಂಚಾಚಾರ್ಯ ಯುವ ವೇದಿಕೆ ಹಾಗೂ ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಏ. 20ರಂದು ಬೆಳಗ್ಗೆ 5 ಗಂಟೆಗೆ ಜಂಗಮ ವಟುಗಳಿಗೆ ಆಯ್ಯಚಾರ (ಶಿವದೀಕ್ಷೆ) ಜರುಗಲಿದೆ ಎಂದು ವ್ಯವಸ್ಥಾಪಕ ಗಿರೀಶ ಇಂಡಿಮಠ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಸ್ತ ಜಂಗಮ ವಟುಗಳಿಗೆ ವಸ್ತ್ರ, ದೋತಿ, ಜಂಗು, ಗಂಟೆ, ಜೋಳಿಗೆ, ರುದ್ರಾಕ್ಷಿಮಾಲೆ, ಬೆತ್ತ, ರೇಣುಕರ ಮೂರ್ತಿ ಸೇರಿದಂತೆ ಧಾರ್ಮಿಕ ವಿಧಿನಿಯಮದಂತೆ ಎಲ್ಲ ವಸ್ತುಗಳನ್ನು ಉಚಿತವಾಗಿ ವಿತರಿಸಲಾಗುವುದು.

ಸಾನ್ನಿಧ್ಯವನ್ನು ದಿಂಡದಹಳ್ಳಿ ಮಠದ ಷ.ಬ್ರ. ಪಶುಪತಿ ಶಿವಾನಂದ ಶಿವಾಚಾರ್ಯರು ಹಾಗೂ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಪೌರೋಹಿತ್ಯವನ್ನು ಕುಮಾರೇಶ್ವರ ಪಾಠಶಾಲೆಯ ವೇ.ಮೂ. ರಾಚಯ್ಯಸ್ವಾಮಿ ಓದಿಸೋಮಠ, ಶಾಸ್ತ್ರಿಗಳಾದ ವೀರಯ್ಯ ಹಿರೇಮಠ, ಚನ್ನಬಸಯ್ಯ ಹಿರೇಮಠ ಸಾಯಿ ಸಂಸ್ಥಾನ ಹಿರೇಮಠದ ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ ನೆರವೇರಿಸುವರು.

ಬಳಿಕ 10 ಗಂಟೆಗೆ ವಿವಿಧ ಮಠಾಧೀಶರು ಹಾಗೂ ಭಕ್ತ ಸಮೂಹದ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಆಶೀರ್ವಚನ, ವಟುಗಳ ನಿಯಮ ಪಾಲನೆ ಕುರಿತು ವಿಶೇಷ ಉಪನ್ಯಾಸ ಜರುಗಲಿದೆ. ಆಸಕ್ತ ವಟುಗಳ ಪಾಲಕರು, ಪೋಷಕರು ಏ. 15ರೊಳಗೆ ಹೆಸರು ನೋಂದಾಯಿಸುವಂತೆ ಪ್ರಕಟಣೆ ಮೂಲಕ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net