

ಕುಶಾಲನಗರ: ನಾಡಿನ ಸರ್ವರೂ ಉತ್ತಮ ಆರೋಗ್ಯ ಹೊಂದುವ ಮೂಲಕ ಸದೃಢ ಸಮಾಜದಲ್ಲಿ ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕಬೇಕೆಂದು ಆಯುಷ್ಯ ಹೋಮ ಮಾಡಿಸಲಾಗುತ್ತಿದೆ ಎಂದು ರಿಜಿಡ್ ಗ್ರೂಪ್‌ನ ನಾಗ ಪ್ರವೀಣ್ ತಿಳಿಸಿದರು.
ಇಲ್ಲಿನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ಶನಿವಾರ ಶ್ರಾವಣ ಮಾಸದ ಪ್ರಯುಕ್ತ ಶನಿ ದೇವರ ಕಥಾ ಶ್ರವಣ, ಗಣಪತಿ ಹೋಮ, ಮೃತ್ಯುಂಜಯ ಮತ್ತು ಆಯುಷ್ಯ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಜನರು ನಿತ್ಯ ಆತಂಕದಲ್ಲೇ ಬದುಕಬೇಕಾಗಿದೆ. ಅಂತಹ ವಾತಾವರಣ ನಿರ್ಮೂಲನೆಯಾಗಿ ವಿವಿಧ ಹೋಮ ನೆರವೇರಿಸಲಾಗಿದೆ ಎಂದು ತಿಳಿಸಿದರು.
ರಿಜಿಡ್ ಗ್ರೂಪ್‌ನ ಕಾರ್ಯಕ್ರಮ ನಿರ್ದೇಶಕ ಎನ್.ವಿ.ಬಾಬು ಮಾತನಾಡಿ, ಮೂರನೇ ಮಹಾ ಯುದ್ಧದ ಕಾರ್ಮೋಡ ಈಗ ಆವರಿಸಿದೆ. ಹೀಗಾಗಿ ವಿಶ್ವ ಶಾಂತಿಗಾಗಿ ಗ್ರೂಪ್‌ನಿಂದ ವಿವಿಧ ಪೂಜೆ ಮಾಡಿಸಲಾಗಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್, ರಿಜಿಡ್ ಗ್ರೂಪ್‌ನ ಎ.ಎಸ್.ಕುಮಾರ್, ವಿ.ಆರ್.ಮಂಜುನಾಥ್, ಎಸ್.ಎಂ.ನಾಗೇಂದ್ರ, ಪಿ.ಕೆ.ರಘು, ವಿ.ವಿ.ತಿಲಕ್, ಜಿ.ರಾಘವೇಂದ್ರ, ಚಿತ್ರಾ, ಪ್ರತಿಮಾ, ದೀಪಾ, ಶ್ವೇತಾ, ಹೇಮಾ ಇತರರು ಉಪಸ್ಥಿತರಿದ್ದರು.