ಜಿಲ್ಲೆಯಾದ್ಯಂತ ಆಯುಷ್ಮಾನ್‌ಭವ ಅಭಿಯಾನ

Ayushman-Bhava-Press-Meet-by-dho-Dr.neeraj
Published on

ಕಾರವಾರ:ರಾಷ್ಟ್ರಾದ್ಯಂತ ಏಕ ಕಾಲದಲ್ಲಿ ನಡೆಯಲಿರುವ ಆಯುಷ್ಮಾನ್‌ಭವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಕಾರವಾರದ ಕ್ರಿಮ್ಸ್ ಆವರಣದಲ್ಲಿ ಸೆ.13 ರಂದು ಚಾಲನೆ ದೊರೆಯಲಿದೆ ಎಂದು ಡಿಎಚ್‌ಒ ಡಾ.ನೀರಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಲಿಯಲ್ಲಿ ಚಾಲನೆ ನೀಡುವರು. ಅದೇ ಸಮಯದಲ್ಲಿ ಇಲ್ಲಿನ ಕ್ರಿಮ್ಸ್‌ ಆವರಣದಲ್ಲಿ ಶಾಸಕ ಸತೀಶ ಸೈಲ್‌ ಚಾಲನೆ ನೀಡುವರು ಎಂದರು.

ಡಿಸೆಂಬರ್ 31 ರವರೆಗೂ ಈ ಅಭಿಯಾನ ನಡೆಯಲಿದೆ. ಪ್ರತಿ ಹಳ್ಳಿಗಳ ಆರೋಗ್ಯ ಉಪ ಕೇಂದ್ರಗಳಲ್ಲಿ ಹಾಗೂ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ರಕ್ತದೊತ್ತಡ, ಮಧುಮೇಹ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿ, ಚಿಕಿತ್ಸೆ ನೀಡುವ ಕಾರ್ಯ ನಡೆಯಲಿದೆ.

ಅಲ್ಲದೆ, ಪ್ರತಿ ಮಂಗಳವಾರ ಆಯುಷ್ಮಾನ್ ಮೇಳ ಮಾಡಿ ಅಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅಂಗಾಗ ದಾನದ ಬಗ್ಗೆ ಮಾಹಿತಿ ನೀಡಲಾಗುವುದು.
ಜಿಲ್ಲೆಯ ದಾಂಡೇಲಿ, ಭಟ್ಕಳದ ಶಿರಾಲಿ ಹಾಗೂ ಮುಂಡಗೋಡಿನ ಪಾಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ಮಂಗಳವಾರ ತಜ್ಞ ವೈದ್ಯರ ವಿಶೇಷ ಶಿಬಿರ ನಡೆಯಲಿದೆ.

ಮೊದಲ ವಾರ ಸಾಂಕ್ರಾಮಿಕವಲ್ಲದ ರೋಗಗಳು, ಎರಡನೇ ವಾರ ಸಾಂಕ್ರಾಮಿಕ ರೋಗಗಳು, ಮೂರನೇ ವಾರ ತಾಯಿ, ಮಗುವಿನ ಆರೋಗ್ಯ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿ ಕ್ರಿಮ್ಸ್ನ ತಜ್ಞ ವೈದ್ಯರು ಆಗಮಿಸಿ ತಪಾಸಣೆ ನಡೆಸಿ, ಸಲಹೆ, ಚಿಕಿತ್ಸೆ ನೀಡುವರು ಎಂದು ವಿವರಿಸಿದರು.

ಇದನ್ನೂ ಓದಿ:ಅವಧಿಗೂ ಮುಂಚೆ ಉಪ್ಪು ನೀರಿನ ಕಾಟ
ಡಾ.ಅರ್ಚನಾ ನಾಯಕ ಮಾತನಾಡಿ, ಈ ಎಲ್ಲ ಕಾರ್ಯಕ್ರಮಗಳಿಗೂ ಆರೋಗ್ಯ ಇಲಾಖೆಗೆ ಗುರಿ ನೀಡಲಾಗಿದೆ. ಗುರಿ ಸಾಽಸಿದ ಜಿಲ್ಲೆಗೆ ಪ್ರಶಸ್ತಿ ನೀಡುವ ವ್ಯವಸ್ಥೆ ಜಾರಿಯಲ್ಲಿ ಇರಲಿದೆ ಎಂದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣ ಅಽಕಾರಿ ಡಾ.ಶಂಕರ ರಾವ್ ಇದ್ದರು. ಕುಷ್ಠ ರೋಗ ಪತ್ತೆ, ಕ್ಷಯ ರೋಗ ಪತ್ತೆಯನ್ನೂ ಇದೇ ಕಾರ್ಯಕ್ರಮದೊಟ್ಟಿಗೆ ಮಾಡಲಾಗುವುದು ಎಂದು ವಿವರಿಸಿದರು. ಅಲ್ಲದೆ, ಕೆಎಫ್‌ಡಿ, ಸಿಕಲ್ ಸೆಲ್ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net