ಆಯುಷ್ ಕಾರ್ಯಾಗಾರ

ayush
Published on

ಕೋಟ: ಇಂದು ಮನುಷ್ಯ ಅತಿಯಾದ ಕಾಯಿಲೆಗಳಿಂದ ನರಳುವ ಸಂದರ್ಭ ಆಯುಷ್ ಚಿಕಿತ್ಸಾ ವಿಧಾನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಇದರ ಬಗ್ಗೆ ಅಲ್ಲಲ್ಲಿ ಮಾಹಿತಿ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು. ಕೋಟದ ಆಶ್ರಿತ್ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆಯುಷ್ ಇಲಾಖೆ ಬೆಂಗಳೂರು, ಉಡುಪಿ ಜಿಲ್ಲಾ ಆಯುಷ್ ಇಲಾಖೆ, ಕುಂದಾಪುರ ತಾಲೂಕು ಆಯುಷ್ ಕೇಂದ್ರ ಘಟಕ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಡಾ.ಶ್ರೀಧರ ಬಾಯಿರಿ, ಡಾ.ಚೈತ್ರಾ ಹೆಬ್ಬಾರ್, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಸೋಮೇಶ್ವರದ ಡಾ.ನೀತಾ ಜೋಗನ್ ಭಾಗವಹಿಸಿದರು. ಆಶ್ರಿತ್ ಕಾಲೇಜು ಮ್ಯಾನೇಜಿಂಗ್ ಡೈರೆಕ್ಟರ್ ಡಾ.ವಿದ್ಯಾಧರ ಶೆಟ್ಟಿ, ಕೋಟ ಗ್ರಾಪಂ ಸದಸ್ಯ ಎಚ್.ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಾಂಶುಪಾಲ ಕೋಟ್ರೇಶಿ ಕೆ.ಎಂ.ಉಪಸ್ಥಿತರಿದ್ದರು. ಕುಂದಾಪುರ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಶೋಕ್ ಸ್ವಾಗತಿಸಿದರು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ.ವೀಣಾ ಕಾರಂತ್ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net