ಆಯುಷ್ ಅಭಿಯಾನದಡಿ 28 ಹುದ್ದೆ ಭರ್ತಿ

Arogya soudha
Published on

ಬೆಂಗಳೂರು: ರಾಷ್ಟ್ರೀಯ ಆಯುಷ್ ಅಭಿಯಾನದಡಿ ಲಭ್ಯವಿರುವ ಅನುದಾನದ ವೆಚ್ಚ ಭರಿಸಿ 28 ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. ಹುದ್ದೆಗಳು ರಾಷ್ಟ್ರೀಯ ಆಯುಷ್ ಅಭಿಯಾನ ಚಾಲ್ತಿಯಲ್ಲಿರುವವರೆಗೆ ಮಾತ್ರ ಮುಂದುವರಿಸುವ ಷರತ್ತಿನೊಂದಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಸಮುದಾಯ ಆರೋಗ್ಯ ಅಧಿಕಾರಿ 26, ಐಟಿ ಕನ್ಸಲ್ಟೆಂಟ್ ಮತ್ತು ಆಪರೇಷನ್ ಮ್ಯಾನೇಜರ್ ತಲಾ 1 ಹುದ್ದೆಗೆ ಅನುಮತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net