ವೈದ್ಯ ವೆಚ್ಚ ಮರುಪಾವತಿಗೆ ಅವಕಾಶ

Ayush
Published on

ಬೆಂಗಳೂರು: ಆರೋಗ್ಯ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ಆಯಾ ಇಲಾಖೆಯಲ್ಲೇ ಅರ್ಹತಾ ಮೊತ್ತ ನಿಗದಿಗೆ ಅವಕಾಶ ನೀಡಿ ಆಯುಷ್ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಆಯುಷ್ ಪದ್ಧತಿಯಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿ ಕೋರಿ ಸಲ್ಲಿಸಿರುವ ಬಿಲ್ಲುಗಳನ್ನು ಬೇರೆ ಇಲಾಖೆಯಿಂದ ಆಯುಷ್ ನಿರ್ದೇಶನಾಲಯಕ್ಕೆ ಸಲ್ಲಿಸಲಾಗುತ್ತಿದೆ. ಸಿಜಿಎಚ್‌ಎಸ್ ದರದಂತೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿಯ ಬಿಲ್ಲುಗಳನ್ನು ಪರಿಶೀಲಿಸಿ ಅರ್ಹತಾ ಮೊತ್ತ ತಿಳಿಸಲು ಆಯುಷ್ ವೆಬ್‌ಸೈಟ್‌ನಲ್ಲಿ ದರಪಟ್ಟಿ ಪ್ರಕಟಿಸಲಾಗಿದೆ. ಇದರಂತೆ ಆಯಾ ಇಲಾಖೆಯೇ ಅರ್ಹತಾ ಮೊತ್ತ ನಿಗದಿ ಮಾಡಬಹುದು. ಈ ಕುರಿತು ಸರ್ಕಾರದಿಂದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳ ಪಟ್ಟಿ ಮತ್ತು ಸರ್ಕಾರದಿಂದ ಅನುಮೋದನೆಗೊಂಡಿರುವ ದರಪಟ್ಟಿ, ಸರ್ಕಾರದಿಂದ ಅನುಮೋದನೆಗೊಂಡಿರುವ ಔಷಧಗಳ ಪಟ್ಟಿಯನ್ನು ಆಯುಷ್ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net