

ನರಗುಂದ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯುಷ್ ಇಲಾಖೆ ವತಿಯಿಂದ ಈಶ್ವರೀಯ ಪರಿವಾರದವರಿಗೆ ಬುಧವಾರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಡಾ.ಅನಿತಾ ಮಾತನಾಡಿ, ಆಯುರ್ವೆದ ಅನಾದಿ ಕಾಲದಿಂದಲೂ ಬಂದಿದ್ದು, ಆಯುರ್ವೆದ ಔಷಧಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ರೋಗಿಯು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಋಷಿ-ಮುನಿಗಳೆಲ್ಲ ಆಯುರ್ವೆದಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ನಾವು ಅವರಂತಾಗಬೇಕು ಎಂದು ತಿಳಿಸಿದರು.
ಸಂಚಾಲಕಿ ಪ್ರಭಕ್ಕ ಮಾತನಾಡಿ, ಪರಮಾತ್ಮ ಭವ ರೋಗಗಳ ವೈದ್ಯನಾಗಿದ್ದಾನೆ. ಪರಮಾತ್ಮನು ಕೊಡುವ ಜ್ಞಾನ ಮತ್ತು ನೆನಪು ಮಾನಸಿಕ ಆರೋಗ್ಯದೊಂದಿಗೆ ಸರ್ವ ರೋಗಗಳಿಂದ ಮುಕ್ತ ಮಾಡಿ ಸದಾ ಖುಷಿಯ ಜೀವನ ನಡೆಸುವುದನ್ನು ಕಲಿಸುತ್ತದೆ ಎಂದರು.
ಆಯುಷ್ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಈಶ್ವರೀಯ ಪರಿವಾರದವರು ಭಾಗವಹಿಸಿದ್ದರು.