ಆಯುರ್ವೇದ ಭಾರತೀಯ ಸಂಸ್ಕೃತಿಯ ಅವಿಭಾಜ್ಯ

16KDR6
Published on

ಕಡೂರು: ಆಯುಷ್ ಆಯುರ್ವೇದ, ಯೋಗ ಮತ್ತು ಹೋಮಿಯೋಪತಿ,ಯುನಾನಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಗೀತಾ ಹೇಳಿದರು.

ಕಾಮನಕೆರೆ ಮುರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮ 2024-25ರ ಯೋಜನೆಯಡಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮುರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಖರ್ಜೂರ ಪಾನಕ ನೀಡಿ, ಆರೋಗ್ಯ, ಆಹಾರ, ಆಯುರ್ವೇದ, ಯೋಗದಿಂದ ಆಗುವ ಪರಿಣಾಮಗಳನ್ನು ವಿವರಿಸಿದರು. ಉತ್ತಮ ಮಾನಸಿಕ ಆರೋಗ್ಯ ಪಡೆಯಲು ಆಯುಷ್ ಔಷಧಿಗಳು ಹಾಗೂ ವ್ಯಾಯಾಮ, ಯೋಗ ಕಲಿಯಬೇಕು ಎಂದರು.

ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ. ದೊಡ್ಡಗುಣಿ ಮಾತನಾಡಿ ಆಯುಷ್ ಇಲಾಖೆ ಮೂಲಕ ಕಾಲೇಜುಗಳ ಮಕ್ಕಳಿಗೆ ಆಯುಷ್ ಔಷಧಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ಮನೆಯಲ್ಲಿರುವ ಅನೇಕ ಪದಾರ್ಥಗಳಾದ ಶುಂಠಿ, ಮೆಣಸು, ತುಳಸಿ, ದೊಡ್ಡಪತ್ರೆ, ಅರಿಶಿನ, ತುಂಬೆ, ನೆಲನೆಲ್ಲಿಗಳ ಉಪಯೋಗಗಳ ಬಗ್ಗೆ ವಿವರಿಸಿ ಇವುಗಳ ಸೇವನೆ ಮತ್ತು ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಕಡೂರಿನ ಯೋಗ ಶಿಕ್ಷಕ ಬಿ.ಎಂ.ಗಿರೀಶ್ ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಪ್ರತಿಯೊಬ್ಬರು ಯೋಗ ಕಲಿಯಬೇಕು ಯೋಗದಿಂದ ಆರೋಗ್ಯ ಭಾಗ್ಯ ಪಡೆಯಲು ಸಾಧ್ಯ ಜೊತೆಗೆ ಅಂತರಾಷ್ಟ್ರಿಯ ಮಟ್ಟದಲ್ಲಿ ಯೋಗಕ್ಕೆ ಉತ್ತಮ ಸ್ಥಾನ ಪಡೆಯಬಹುದಾಗಿದೆ ಎಂದರು.

ಪ್ರಾಚಾರ್ಯೆ ದಿವ್ಯಶ್ರೀ ಮೋಹನ್, ಡಾ.ಶ್ರೀನಿವಾಸನಾಯ್ಕ, ಡಾ.ಮಂಜುನಾಥ್, ರತ್ನಶೇಖರ್, ಡಾ.ಮಧು ವಸತಿ ಶಾಲೆಯ ಶಿಕ್ಷಕರಾದ ವಸಂತ್‌ಕುಮಾರ್, ಜ್ಯೋತಿ, ಗೋಪಿನಾಥ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net