

ಶಿಗ್ಗಾಂವಿ: ಆಯುರ್ವೆದವು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಹೊಂದುವ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಾಗಿದೆ ಎಂದು ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಸಿ. ತ್ಯಾಗರಾಜ ಹೇಳಿದರು.
ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ಈ ಆಯುರ್ವೆದ ಪದ್ಧತಿ ರೋಗ ಬರದಂತೆ ತಡೆಯುವ ಚಿಕಿತ್ಸಾ ವಿಧಾನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಆಯುಷ್ ಮಂತ್ರಾಲಯದಿಂದ ‘ದೇಶ ಕಾ ಪ್ರಕೃತಿ’ ಪರೀಕ್ಷಾ ಅಭಿಯಾನ ನಡೆಸಲಾಗುತ್ತಿದೆ. ಆ ಮೂಲಕ ಆಯಾ ಪ್ರಕೃತಿ ಅನುಸಾರ ಆಹಾರ, ವಿಹಾರ ಹಾಗೂ ದೈನಂದಿನ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಂಡರೆ ರೋಗ ಬರದಂತೆ ತಡೆಯಬಹುದು ಎಂದರು.
ಸಿಂಪಿ ಸಮಾಜದ ಕಾರ್ಯಾಧ್ಯಕ್ಷ ಕೇದಾರಪ್ಪ ಬಗಾಡೆ ಮಾತನಾಡಿದರು. ಶಿಬಿರದಲ್ಲಿ ಮೂಲವ್ಯಾದಿ, ಪರೀಕರ್ತಿಕ, ಕೂದಲು ಸಮಸ್ಯೆ, ಹಿಮ್ಮಡಿ ನೋವು ಸೇರಿ ಸುಮಾರು 300ಕ್ಕೂ ಹೆಚ್ಚು ರೋಗಿಗಳು ಉಚಿತ ತಪಾಸಣೆ ಮಾಡಿಸಿಕೊಂಡರು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುರೇಶ ಮುಳೆ, ಡಾ. ಪ್ರಭಾಕರ ತಾಸಿನ, ಡಾ. ರಂಜಿತ ಕುಮಾರ, ರೂಪಾ ಬಗಾಡೆ, ಡಾ. ಐಶ್ವರ್ಯಾ ಬಗಾಡೆ ಡಾ. ಗಣೇಶ ಬಿ., ಡಾ. ಗೀತಾ ಹಿರೇಮಠ, ವಿರೂಪಾಕ್ಷಪ್ಪ ಬಗಾಡೆ, ಡಾ. ಗೈಬು ನಾಯ್ಕರ, ಡಾ. ಸುರೇಶ ಪೂಜಾರ, ಇತರರಿದ್ದರು.