

ಮಡಿಕೇರಿ: ರಾಷ್ಟ್ರೀಯ ಸಂಯೋಜಿತ ವೈದ್ಯ ಪದ್ದತಿಗಳ ಸಂಘಟನೆಯ ಕೊಡಗು ಶಾಖೆಯ ವತಿಯಿಂದ ಕೊಡಗು ಸಂಘದ ವೈದ್ಯರಿಗೆ ಮಡಿಕೇರಿಯಲ್ಲಿ ನಿರಂತರ ಶಿಕ್ಷಣ ಏರ್ಪಡಿಸಲಾಗಿತ್ತು.
ಸುಳ್ಯದ ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ಡಾ.ರೋಹಿಣಿ ಭಾರದ್ವಾಜ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಆಯುರ್ವೇದದಲ್ಲಿ ಶೀಘ್ರವಾಗಿ ಕೆಲಸ ಮಾಡುವ ಮದ್ದುಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದರು.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ವಿಶೇಷ ಆಯುರ್ವೇದ ಮದ್ದಿನ ಬಗ್ಗೆ ಡಾ.ಉದಯ ಕುಮಾರ್.ಎಸ್.ಮಾಹಿತಿ ನೀಡಿದರು. ನೀಮಾ ಕೊಡಗು ಅಧ್ಯಕ್ಷ ಡಾ.ರಾಜಾರಾಮ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೫ಕ್ಕೂ ಹೆಚ್ಚು ಕೊಡಗಿನ ಆಯುಷ್ ವೈದ್ಯರು ನಿರಂತರ ಶಿಕ್ಷಣದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಡಾ.ರೋಶನ್, ಡಾ.ಅನುಷಾ, ಡಾ.ಹೀನಾ ಕೌಸರ್, ಡಾ.ಸೌಮ್ಯ ಗಣರಾಜ್, ನೀಮಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ, ಡಾ.ಶೈಲಜಾ ಮುರಳೀಧರ, ಡಾ.ರಾಜೇಂದ್ರ ಇತರರು ಉಪಸ್ಥಿತರಿದ್ದರು.