ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಕ್ರಮ

Ayurveda
Published on

ಮಡಿಕೇರಿ:

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್.ಐ.ಎಂ.ಎ) ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೆಡ್ಡು ಆಯುರ್ವೇದ ಆಸ್ಪತ್ರೆ ಮತ್ತು ಜೆಡ್ಡು ಫಾರ್ಮಸಿ ಸ್ಥಾಪಕ ಡಾ. ಗಣಪತಿ ಭಟ್ ಜೆಡ್ಡು ಮಾತನಾಡಿ ಆರೋಗ್ಯ ಕಾಪಾಡಲು ಆಯುರ್ವೇದ ಇಂದಿನ ಅಗತ್ಯವಾಗಿದೆ. ವೃದ್ಯಾಪ್ಯದಲ್ಲಿ ಯೌವನ ಕಾಪಾಡುವಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಸಮಯಕ್ಕೆ ಸರಿಯಾದ ಭೋಜನ, ನಮ್ಮ ಜೀವನಶೈಲಿ, ಮಾನಸಿಕ ಸುಸ್ಥಿತಿ, ಹೀಗೆ ಯಾವ ಬದಲಾವಣೆ ಹೇಗೆ ನಮ್ಮ ದೀರ್ಘಾಯಷ್ಯವನ್ನು ಆರೋಗ್ಯಕರವಾಗಿ ಉತ್ಸಾಹಭರಿತವಾಗಿ ಕಾಪಾಡುವಲ್ಲಿ ಆಯುರ್ವೇದ ನೆರವಾಗುತ್ತದೆ. ವಿರಾಮವಿಲ್ಲದೆ, ನಿಯಮಿತ ಗುರಿ ಇಲ್ಲದೆ ಓಡುತ್ತಿರುವ ಈ ಸಮಾಜ ವಿಶ್ರಮಿಸುವಷ್ಟರಲ್ಲಿ ವಾರ್ಧಕ್ಯ ಮತ್ತು ಅನಾರೋಗ್ಯ ಮಾನವನನ್ನು ಸಂಪೂರ್ಣ ದುರ್ಬಲನನ್ನಾಗಿಸುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಉಪಚಾರಗಳನ್ನು ಕೂಡ ಮಾಡುವುದರ ಮೂಲಕ ಆರೋಗ್ಯಕರ ವಾರ್ಧಕ್ಯವನ್ನು ಕಳೆಯುವ ಬಗ್ಗೆ ಡಾ. ಗಣಪತಿ ಭಟ್ ಎಚ್ಚರಿಕೆಯ ಸಲಹೆ ನೀಡಿದರು.

ಎನ್.ಐ.ಎಂ.ಎ. ಕೊಡಗು ಘಟಕದ ಅಧ್ಯಕ್ಷ ಡಾ. ರಾಜಾರಾಮ್, ಕಾರ್ಯದರ್ಶಿ ಡಾ. ಶ್ಯಾಮಪ್ರಸಾದ ಪಿ.ಎಸ್., ಖಜಾಂಜಿ ಡಾ. ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಖಜಾಂಚಿ ಡಾ.ಹೀನ, ಡಾ.ಈಶ್ವರಿ, ಡಾ.ರೋಷನ್, ಡಾ.ಅನುಷಾ, ಡಾ.ಉದಯಶಂಕರ್, ಡಾ.ಉದಯಕುಮಾರ್, ಡಾ.ಸಾವಿತ್ರಿ, ಡಾ. ರಾಜೇಂದ್ರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net