

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ರೋಗಗಳನ್ನು ನಿವಾರಿಸುವುದಕ್ಕಿಂತ ರೋಗಗಳು ಬಾರದಂತೆ ತಡೆಗಟ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿನೂತನ ಸಂಸತಿ ಹೆಚ್ಚುತ್ತಿದೆ. ಇದರ ಯಶಸ್ಸಿಗೆ ಆಯುರ್ವೇದದ ಪಾತ್ರ ಅತಿ ಮುಖ್ಯವಾದದ್ದು ಎಂದು ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಹೇಳಿದರು.
ನಗರದ ಗೋಕುಲ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಆರೋಗ್ಯ ಸಂಸತಿ ನಿರ್ಮಾಣಕ್ಕೆ ಆಯುರ್ವೇದವೇ ಮೂಲವಾಗಿದೆ. ಆಯುರ್ವೇದದ ವಿಶೇಷ ಚಿಕಿತ್ಸಾ ಕ್ರಮಗಳಾದ ಪಂಚಕರ್ಮ, ಕ್ಷಾರ ಸೂತ್ರ ಚಿಕಿತ್ಸೆ, ರಸಾಯನ ಮುಂತಾದವುಗಳನ್ನು ಅತಿಹೆಚ್ಚು ಜನರಿಗೆ ತಲಪುವಂತೆ ಮಾಡಿ, ಣಿಸುತ್ತಿದ್ದ ಆಯುರ್ವೇದದ ಗತ ವೈಭವವನ್ನು ಪುನರ್ ಸ್ಥಾಪಿಸುವುದು ಆಯುರ್ವೇದ ದಿನಾಚರಣೆಯ ಪ್ರಮುಖ ಉದ್ದೇಶ ಎಂದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂದ ಅಧ್ಯ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಆಯುರ್ವೇದಕ್ಕೆ ಪ್ರಪಂಚದ ಅನೇಕ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಲ್ಲಿಯೂ ಪ್ರಾಮುಖ್ಯತೆ ಹಾಗೂ ಮಾನ್ಯತೆ ದೊರಕುತ್ತಿದೆ. ಈ ಸಂದರ್ಭದಲ್ಲಿ ಆಯುರ್ವೇದ ತರು, ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಯುರ್ವೇದವನ್ನು ನವೀಕರಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಅತಿಥಿಯಾಗಿದ್ದ ಮೈಸೂರಿನ ಶಾರದಾ ಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತಾಚಾರ್ಯ ಜೋಶಿ ಅವರು ಮಾತನಾಡಿ, ಆಯುರ್ವೇದವು ಒಂದು ವಿಶಾಲವಾದ ಸಾಗರವಿದ್ದಂತೆ, ಅದನ್ನು ಅರ್ಥೈಸಿಕೊಳ್ಳಲು ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿರ್ಗಳು ಮೊಬೈಲ್ ರ್ದುಬಳಕೆಯಿಂದ ದೂರವಿದ್ದು ಆಯುರ್ವೇದದ ಗ್ರಂಥ ಹಾಗೂ ಸಂಹಿತೆಗಳ ಕೂಲಂಕಷವಾದ ಅಧ್ಯಯನ ನಡೆಸಬೇಕೆರಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಡಾ. ಚರಂತಯ್ಯ ಹಿರೇಮಠ ಮಾತನಾಡಿ, ಆಯುರ್ವೇದದಲ್ಲಿರುವ ಅನೇಕ ತತ್ವ ಸಿದ್ಧಾಂತಗಳ ಮೇಲೆ ಸಂಶೋಧನೆಗಳನ್ನು ನಡೆಸುವುದು ಒಂದು ದೊಡ್ಡ ಸವಾಲಿದ್ದಂತೆ. ಆದರೆ, ಆ ಸವಾಲನ್ನೇ ಒಂದು ಅವಕಾಶವನ್ನಾಗಿಸಿಕೊಂಡು ನಮ್ಮ ಸಂಸ್ಥೆಯು ಅನೇಕ ಸಂಶೋಧನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗೌರೀಶ ಅಸೂಟಿ ಸ್ವಾಗತಿಸಿದರು, ಸಂಸ್ಥೆಯ ಕಾರ್ಯದಶಿರ್ ಡಾ. ಸೋಮಶೇಖರ ಹುದ್ದಾರ ವಂದಿಸಿದರು. ಸೃಷ್ಟಿ ರೇವಡಿಗರ ಹಾಗೂ ಅನಿತಾ ಇವರು ಧನ್ವಂತರಿ ಸ್ತವನದ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಪವಿತ್ರಾ, ಧಾತ್ರಿ, ಸೌಮ್ಯ ಅವರು ಧನ್ವಂತರಿ ಗೀತೆ ಹಾಡಿದರು. ಸಾ ಪಟವರ್ಧನ್ ನಿರೂಪಿಸಿದರು.