

ಹನೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯುಧಪೂಜೆ ಅಂಗವಾಗಿ ಠಾಣೆಯನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳಿಗೆ ಅರ್ಚಕರಿಂದ ಪೂಜೆ ನೆರವೇರಿಸಿ ಸಿಹಿ ವಿತರಿಸಲಾಯಿತು. ಇನ್‌ಸ್ಪೆಕ್ಟರ್ ಶಶಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್, ಎಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಬಿಳಿ ಪಂಚೆ, ಷರ್ಟ್ ಧರಿಸಿ ಸಂಭ್ರಮಿಸಿದರು. ಈ ಮೂಲಕ ಠಾಣೆಯಲ್ಲಿ ಆಯುಧಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಫೋಟೋ
12 ಹನೂರು 3 ಹನೂರು ಪೊಲೀಸ್ ಠಾಣೆಯಲ್ಲಿ ಆಯುಧಪೂಜೆಯನ್ನು ನೆರವೇರಿಸಲಾಯಿತು. ಶಶಿಕುಮಾರ್, ಮಂಜುನಾಥ್ ಪ್ರಸಾದ್, ಶಿವಕುಮಾರ್, ರಾಘವೇಂದ್ರ, ಚೈತ್ರ ಇತರರಿದ್ದರು.