

ಭಾಲ್ಕಿ: ಬಡವರು, ನಿರ್ಗತಿಕರ ಕಲ್ಯಾಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶಿವು ಲೋಖಂಡೆ ಹೇಳಿದರು.
ಪಟ್ಟಣದ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನವರಾತ್ರಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಪರಿಣಾಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವು ವಿಧಾಯಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಬಡಜನರು, ನಿರ್ಗತಿಕರು, ದುರ್ಬಲ ವರ್ಗದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿರುವುದು ಮಾದರಿ ಎನಸಿದೆ ಎಂದು ತಿಳಿಸಿದರು.
ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂತೋಷ ಮಾತನಾಡಿದರು. ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಸಂತೋಷ ಬಿಜಿ ಪಾಟೀಲ್, ಶಿವರಾಜ ಮಲ್ಲೇಶಿ, ಶೇಖರ, ಶಿವಾನಂದ, ಲಾಯಪ್ಪ, ಸುರೇಶ, ಶ್ರೀಕಾಂತ, ಪೀರಪ್ಪ, ಸಬೀನಾ, ಸುಜಾತಾ, ಮಲ್ಲಿಕಾರ್ಜುನ, ಶಿವರಾಜ, ವಿನಯ, ಗುರುರಾಜ, ಜ್ಞಾನೇಶ್ವರ ಇತರರಿದ್ದರು.